ಬಿಜೆಪಿ ಯುವಮೊರ್ಚಾಕ್ಕೆ ವಿದ್ಯಾರ್ಥಿಗಳ ಸವಾಲು
ಪುಣೆ, ಮಾ.29: ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಂವಿಧಾನದ ರಕ್ಷಣೆಗಾಗಿ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಆರ್‌ಎಸ್‌ಎಸ್, ಎಬಿವಿಪಿ, ಬಿಜೆವೈಎಮ್ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ದಿಲ್ಲಿ ಜೆಎನ್ ವಿವಿ ವಿದ್ಯಾ ರ್ಥಿ ಸಂಘದ ಅಧ್ಯಕ್ಷ ಕನ್ನೇಯ ಕುಮಾರ್ ಹೇಳಿದ್ದಾರೆ.
ಪುಣೆಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್ ಎಫ್)ಮತ್ತು ಇತರ ಸಂಘಟನೆಗಳು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೂರವಾಣಿ ಮೂಲಕ ಮಾತನಾಡಿದ ಅವರು ಪುಣೆ ವಿವಿಗೊಳಪಟ್ಟ ಪತ್ರಿಕೋದ್ಯಮ ಕಾಲೇಜು ರಾನಡೆ ಸಂಸ್ಥೆ , ಫರ್ಗ್ಯುಸನ್ ಕಾಲೇಜು , ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ) ವಿದ್ಯಾರ್ಥಿ ಸಂಘಟನೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಎಬಿವಿಪಿ, ಬಿಜೆವೈಎಮ್ ಸಂಘಟನೆಗಳು ಆರ್‌ಎಸ್‌ಎಸ್‌ನ ಘಟಕಗಳಾಗಿದ್ದು, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ವಿರೋಧಿಸುತ್ತಿವೆ. ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಯ ಪರ ಹೋರಾಟ ನಡೆಸಲು ತಾನು ಯಾವುದೇ ನಗರಕ್ಕೂ ತೆರಳಲು ಸಿದ್ದ ಎಂದು ಕನ್ನೇಯ ಕುಮಾರ್ ಹೇಳಿದ್ದಾರೆ.
’’ಸರಕಾರ ವಿದ್ಯಾರ್ಥಿಗಳ ಹಕ್ಕು, ಸ್ವಾತಂತ್ರ‍್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಫರ್ಗ್ಯೂಸನ್ ಕಾಲೇಜಿನಲ್ಲಿ ಎಬಿವಿಪಿ ಆಯೋಜಿಸಿದ್ದ "ಜೆಎನ್‌ಯು ಸತ್ಯ; ಚರ್ಚಾಕೂಟದಲ್ಲಿ ಬಿಜೆವೈಎಮ್‌ನ ನಾಯಕರೊಬ್ಬರು ಮಾತನಾಡಿ ರಾನಡೆ ಕಾಲೇಜಿನ ವಿದ್ಯಾರ್ಥಿಗಳು ಒಂದು ವೇಳೆ ಕನ್ನೇಯ ಕುಮಾರ್‌ನ್ನು ಇಲ್ಲಿಗೆ ಆಹ್ವಾನಿಸಿದರೆ ನಿಮಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ರಾನಡೆ ಸಂಸ್ಥೆ , ಫರ್ಗ್ಯುಸನ್ ಕಾಲೇಜು , ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ) ಒಗ್ಗಟ್ಟಾಗಿ ಕನ್ನೇಯಾ ಕುಮಾರ್‌ನ್ನು ಆಹ್ವಾನಿಸಿದ್ದಾರೆ. ಆದರೆ ಕನ್ನೇಯ ಕುಮಾರ್ ಬರುವ ದಿನಾಂಕ ನಿಗದಿಯಾಗಿಲ್ಲ ಎಂದು ಎಐಎಸ್‌ಎಫ್ ಸದಸ್ಯರು ತಿಳಿಸಿದ್ದಾರೆ.