ಮುಲ್ಕಿ: ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ
Update: 2016-03-29 14:47 IST
ಮುಲ್ಕಿ, ಮಾ.29: ಮುಲ್ಕಿ ಕೋಟೆಕೇರಿಯ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮುಂಬೈನ ಸದಾಶಿವ ಶಾಂತಿ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ವಹಿಸಿದ್ದು. ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ, ರಂಗ ಕಲಾವಿದ ನರೇಂದ್ರ ಕೆರೆಕಾಡುರನ್ನು ಸನ್ಮಾನಿಸಲಾಯಿತು. ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಹೆಜಮಾಡಿ ಕೋಟೆ ಹೌಸ್ ಕೆ.ಎಸ್.ಶೇಖಬ್ಬ, ಯೋಗ ಗುರು ಜಯ ಮುದ್ದು ಶೆಟ್ಟಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು. ಯುವಕ ವೃಂದದ ಅಧ್ಯಕ್ಷ ಸತೀಶ್ ಅಂಚನ್ ಜಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.