ನಾರ್ತ್ ಕೆನರಾ ಮುಸ್ಲಿಮ್ ಯುನೈಟೆಡ್ ಫೋರಂ ಜಿಲ್ಲಾಧ್ಯಕ್ಷರಾಗಿ ಇಮ್ತಿಯಾಝ್ ಶೇಕ್ ಆಯ್ಕೆ
ಭಟ್ಕಳ, ಮಾ.29: ಉತ್ತರ ಕನ್ನಡ ಜಿಲ್ಲಾ ಮುಸ್ಲಿಮ್ ಸಮುದಯಾದ ಐಕ್ಯವೇದಿಕೆಯಾಗಿರುವ ನಾರ್ತ್ ಕೆನರಾ ಮುಸ್ಲಿಮ್ ಯುನೈಟೆಡ್ ಫೋರಂ ನೂತನ ಅಧ್ಯಕ್ಷರಾಗಿ ಯುವ ಮುಖಂಡ ಇಮ್ತಿಯಾಝ್ ಉಮರ್ ಶೇಕ್ ಸರ್ವಾನುಮತದಿಂದ ಆಯ್ಕಗೊಂಡರು.
ಇತ್ತಿಚೆಗೆ ಕುಮಟಾದ ಮದ್ರಸಾ-ಎ- ಮುಹಮ್ಮದಿಯ ಸಬೀಲುಲ್ ಹುದಾ ಸಭಾಂಗಣದಲ್ಲಿ ಜರಗಿದ ಫೋರಂ ನ ವಾರ್ಷೀಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮವಾಗಿದೆ ಎಂದು ತಿಳಿದು ಬಂದಿದ್ದು ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮೊಹಸಿನ್ ಆಯ್ಕೆಗೊಂಡಿದ್ದಾರೆ.
ಫೋರಂ ನ ಉಪಾಧ್ಯಕ್ಷರಾಗಿ ಕಾರವಾರದ ಮಕ್ಬೂಲ್ ಶೇಖ್, ಭಟ್ಕಳದ ಸೈಯದ್ ಮೊಹಿದ್ದೀನ್ ಬರ್ಮಾವರ್, ಶಿರಸಿ ಯ ನಾಸಿರ್ ಖಾನ್ ಮತ್ತು ಹಳಿಯಾಳದ ಉಸ್ಮಾನ್ ತಾಲ್ಗೋಟ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಭಟ್ಕಳದ ಮೌಲಾನಾ ಸವೂದ್ ನದ್ವಿ, ಸಿದ್ದಾಪುರದ ಮೆಹಬೂಬ್ ಅಲಿ, ದಾಂಡೇಲಿಯಅಬ್ದುಲ್ ಸತ್ತಾರ್, ಸಹಕಾರ್ಯದರ್ಶಿಗಳಾಗಿ ಹೊನ್ನಾವರದ ಹಸನ್ ಪಾನೀಬೂಡೆ, ಮುಂಡಗೋಡದ ಯಾಕೂಬ್ ಯಲವಾಡ, ಕುಮಟಾದ ಮೊಹಮ್ಮದ್ ಹನೀಫ್, ಹಣಕಾಸು ಕಾರ್ಯದರ್ಶಿಯಾಗಿ ಅಂಕೋಲಾದ ಎಮ್.ಮುಲ್ಲಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಯಲ್ಲಾಪುರದ ಶೇಖ್ ಆಯ್ಕೆಯಾಗಿದ್ದಾರೆ.
ಚುನಾವಣಾ ಕಮೀಶನರುಗಳಾಗಿ ಕುಮಟಾದ ಎಮ್.ಎಮ್.ಇಬ್ರಾಹಿಂ ಮತ್ತು ಅಂಕೋಲಾದ ಅಬ್ದುಲ್‌ಕರೀಂ ಆಯ್ಕೆಯಾಗಿದ್ದಾರೆ.
ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮುರ್ಡೇಶ್ವರದ ಮೌಲಾನಾ ಮುಹಮ್ಮದ್ ಹುಸೇನ್‌ಗೈಮಾ ನದ್ವಿ ಮಾತನಾಡಿ ಸಮುದಾಯವು ಒಗ್ಗಟ್ಟಿನ ಮೂಲಕ ದೊಡ್ಡ ಉದ್ದೇಶವನ್ನು ಸಾಧಿಸಬಹುದು ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಬಸ್ತಿ ಮುಹಮ್ಮದ್ ಮಲಿಕ್ ಸಾಹೇಬ್ ಮಾತನಾಡಿ ಇದು ಜಿಲ್ಲೆಯ ಏಕ ಮಾತ್ರ ಒಗ್ಗಟ್ಟಿನ ಸಂಘಟನೆಯಾಗಿದ್ದು ವಿಶೇಷವಾಗಿ ಜಿಲ್ಲೆಯಲ್ಲಿ ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ ಕಾಳಜಿ, ಮಾಹಿತಿ, ಆರ್ಥಿಕ ಬೆಳವಣಿಕೆ ಮತ್ತು ಸಾರ್ವಜನಿಕರು ಎದುರಿಸುವ ತೊಂದರೆಗಳಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.
ಮೌಲಾನಾ ಮಿನ್ನತುಲ್ಲಾ ಕಾಸ್ಮಿ ಪವಿತ್ರಕುರ್‌ಆನ್ ನ ಕೆಲವು ಉಕ್ತಿಗಳನ್ನು ಪಠಿಸುವ ಮೂಲಕ ಮಹಾಸಭೆಯನ್ನು ಉದ್ಘಾಟಿಸಿದರು.
ಮೊಹಮ್ಮದ್ ಮೊಹ್ಸಿನ್ ಸ್ವಾಗತಿಸಿದರು.ಡಾ. ಮುಹಮ್ಮದ್ ಹನೀಫ್ ಶಬಾಬ್ನಿ ರೂಪಿಸಿದರು.