ಕ್ಯಾಲಿಫೋರ್ನಿಯ : ಮುಸ್ಲಿಮರ ಹತ್ಯಾಕಾಂಡ ನಡೆಸುವ ಬೆದರಿಕೆ ಹಾಕಿದವನಿಗೆ ಕೇವಲ 90 ದಿನದ ಜೈಲು ಶಿಕ್ಷೆ !

Update: 2016-03-29 10:16 GMT

ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದ ರಿಚ್ಮಂಡ್ ಪ್ರದೇಶದಲ್ಲಿರುವ ಮಸೀದಿಯ ಹೊರಗೆ ನಿಂತುಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರಬರುತ್ತಿರುವವರನ್ನು ಉದ್ದೇಶಿಸಿ ‘ನಾನು ನಿಮ್ಮನ್ನೆಲ್ಲಾ’ ಕೊಲ್ಲುತ್ತೇನೆ,’’ ಎಂದು ಬೊಬ್ಬಿರಿದು ಹೇಳಿದ ಕ್ರೈಸ್ತ ವ್ಯಕ್ತಿ ವಿಲಿಯಂ ಸೆಲ್ಲಿ ಎಂಬವನಿಗೆ ಅಲ್ಲಿನ ಕೋರ್ಟೊಂದು ಕೇವಲ 90 ದಿನಗಳ ಜೈಲು ಶಿಕ್ಷೆ ವಿಧಿಸಿ ಎಲ್ಲರ ಹುಬ್ಬೇರಿಸಿದೆ.

ಇಲ್ಲಿ ಮತ್ತೂ ಆಶ್ಚರ್ಯಕರ ಅಂಶವೆಂದರೆ ಸ್ಯಾನ್ ಬರ್ನಾಡಿನೋ ದಾಳಿ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಸೆಲ್ಲಿಯ ಫೇಸ್‌ಬುಕ್ ಪುಟದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಹೇಳಿಕೆಗಳಿದ್ದವು. ಒಂದು ಪೋಸ್ಟಿನಲ್ಲಂತೂ ‘‘ಎಲ್ಲಾ ಮುಸ್ಲಿಮರನ್ನೂ ಅವರು ಇಲ್ಲಿ ಹುಟ್ಟಿದ್ದರೂ ಅಲ್ಲದಿದ್ದರೂ ಅವರ ಮೂಲ ದೇಶಕ್ಕೆ ಕಳುಹಿಸಬೇಕೆಂದು’ ಬರೆದಿತ್ತು. ಇದಕ್ಕೂ ಸ್ವಲ್ಪ ದಿನ ಮೊದಲು ಆತ ತನ್ನ ಫೇಸ್‌ಬುಕ್ ಪುಟದಲ್ಲಿ ತಾನೇ ನಿರ್ಮಿಸಿದ್ದೆನ್ನಲ್ಲದಾದ ಪೈಪ್ ಬಾಂಬ್ ಫೊಟೋ ಒಂದನ್ನೂ ಪ್ರಕಟಿಸಿದ್ದ. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ರೇಸಿನಲ್ಲಿರುವ ಡೊನಾಲ್ಡ್ ಟ್ರಂಪ್ ಅಭಿಮಾನಿ ತಾನೆಂದು ಕೂಡ ಹೇಳಿಕೊಂಡಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾಗ ಆತನಕೆಲವೊಂದು ಉದ್ದೇಶಗಳನ್ನು ಕೇಳಿ ದಂಗಾಗಿದ್ದರು. ಇದನ್ನೊಂದು ದ್ವೇಷಯುಕ್ತ ಅಪರಾಧವೆಂದು ಬಣ್ಣಿಸಿದ್ದ ನ್ಯಾಯಾಧೀಶೆ ಆತನ ಜಾಮೀನಿಗೆ 5,00,00$ ಪಾವತಿಸಬೇಕೆಂದು ಹೇಳಿದ್ದರು. ಸೆಲ್ಲಿ ಇನ್ನೂ ಹಲವು ವರ್ಷಗಳ ಕಾಲ ಜೈಲಿನಲ್ಲಿಬೇಕು ಎಂದು ಎಲ್ಲರೂ ಯೋಚಿಸುವಷ್ಟರಲ್ಲಿಯೇ ನ್ಯಾಯಾಲಯ ಆತನಿಗೆ ಕೇವಲ 90 ದಿನಗಳ ಜೈಲು ಶಿಕ್ಷೆ ವಿಧಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.

ಸ್ಥಳೀಯ ಮುಸ್ಲಿಂ ನಾಯಕರುಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಸೆಲ್ಲಿ ವಿರುದ್ಧ ಭ್ಯವಿರುವ ಸಾಕ್ಷ್ಯಗಳನ್ನು ಗಮನಿಸಿದಾಗ ಆತನಿಗೆ ಇದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸುವ ಹಾಗಿಲ್ಲವೆಂದು ಅವರಿಗೆ ತಿಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News