ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿ.ಸೋಮಶೇಖರ್ ಸುಳ್ಯಕ್ಕೆ
Update: 2016-03-29 17:04 IST
ಸುಳ್ಯ: ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿ.ಸೋಮಶೇಖರ್ ಸುಳ್ಯದ ಗ್ರೀನ್‌ವ್ಯೆ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಂತೆ. ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಆರೋಗ್ಯ ಬೇಕು. ಉತ್ತಮ ಆರೋಗ್ಯ ಕ್ರೀಡೆ ಪೂರಕ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಿದಷ್ಟೇ ಆಧ್ಯತೆಯನ್ನು ಕ್ರೀಡೆಗೂ ನೀಡಬೇಕು. ಪ್ರಾಧಿಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಅವರು ಹೇಳಿದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಅನ್ಸಾರ್ ಅನಾಥಾಲಯದ ಅಧ್ಯಕ್ಷ ಅಬ್ಬಾಸ್ ಕಟ್ಟೆಕಾರ್ಸ್, ಅಬ್ದುಲ್ ಹಮೀದ್, ಶಿಕ್ಷಣ ಸಂಸ್ಥೆಯ ಸಂಚಾಲಕ ಬಿ.ಎಸ್.ಶರೀಫ್, ಕೆ.ಬಿ.ಇಬ್ರಾಹಿಂ, ಮುಖ್ಯ ಶಿಕ್ಷಕ ಬಿ.ಪಿ.ಅಮರನಾಥ ಮೊದಲಾದವರು ಉಪಸ್ಥಿತರಿದ್ದರು.