×
Ad

ಬೆಳ್ತಂಗಡಿ : ಅಕ್ರಮ ಕಸಾಯಿಖಾನೆಗೆ ಧಾಳಿ, ದನದ ದೇಹ ಮತ್ತು ನಾಲ್ಕು ಬೈಕ್‌ಗಳ ವಶ

Update: 2016-03-29 20:28 IST

ಬೆಳ್ತಂಗಡಿ: ನಡ ಗ್ರಾಮ ಪಂಚಾಯತು ವ್ಯಾಪ್ತಿಯ ಕನ್ಯಾಡಿ ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಧಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಹತ್ಯೆ ಮಾಡಲಾದ ದನದ ದೇಹ ಮತ್ತು ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಎಸ್ಸ್‌ಐ ಸಂದೇಶ್ ನೇತೃತ್ವದ ಪೋಲೀಸ್ ತಂಡ ಗುರಿಪಳ್ಳದ ಜಾರ್ಜ ಎಂಬವರ ತೋಟಕ್ಕ ಧಾಳಿ ನಡೆಸಿದಾಗ ಅಕ್ರಮ ಕಸಾಯಿಖಾನೆ ಪತ್ತೆಯಾಗಿದೆ. ಪೋಲೀಸರು ಬರುವುದನ್ನು ಗಮನಿಸಿದ ಆರೋಪಿಗಳು ಹತ್ಯೆ ಮಾಡಿದ್ದ ದನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳದಿಂದ ಹತ್ಯೆಗೆ ಬಳಸಿದ್ದ ಕತ್ತಿ ಹಾಗೂ ಇತರೆ ವಸ್ತುಗಳನ್ನು ಅವರು ಉಪಯೋಗಿಸಿದ್ದ ನಾಲ್ಕು ಬೈಕ್‌ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳು ಸ್ಥಳೀಯ ನಿವಾಸಿಗಳಾದ ಜಾರ್ಜ್, ಸೈಮನ್, ಬಿನೋಯಿ, ಹಾಗೂ ಮನೋಜ್ ಎಂದು ಗುರುತಿಸಲಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರನ ದಾಖಲಿಸಲಾಗಿದ್ದು ಪೋಲೀಸರು ತನಿಖೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News