ಮಂಗಳೂರು : ವಾರೀಸುದಾರರ ಪತ್ತೆಗೆ ಮನವಿ
ಮಂಗಳೂರು, ಮಾ.29: ಕಾರೊಂದು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವಕನ ವಾರೀಸುದಾರರಿದ್ದಲ್ಲಿ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಮಾ. 24 ರಂದು ಹರಿಶ್ಚಂದ್ರ ಎಂಬವರು ತನ್ನ ಕಾರನ್ನು ಮಂಗಳೂರು ಕಡೆಯಿಂದ ಬಿ.ಸಿರೋಡ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕಣ್ಣೂರು ಶ್ರೀ ಮಾತಾ ನರ್ಸರಿ ಬಳಿ ರಸ್ತೆ ದಾಟುತ್ತಿದ್ದ 21 ವರ್ಷದ ಅಪರಿತ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಪಾದಚಾರಿಯು ಕಾರಿನ ಮೇಲೆ ಎಸೆಯಲ್ಪಟ್ಟು ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ಪ್ರಜ್ಞಾಹೀನರಾಗಿದ್ದು, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರಿಚಿತ ವ್ಯಕ್ತಿಯ ವಾರೀಸುದಾರರು ಪತ್ತೆಯಾದಲ್ಲಿ ಸಂಚಾರ ಪೂರ್ವ ಪೊಲೀಸ್ ಠಾಣೆ, ಕದ್ರಿ ಇವರನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.