ಕಂಪೆನಿಗಳು 75 ಶೇ. ಸೌದಿ ನೌಕರರನ್ನು ಹೊಂದಿರಬೇಕು: ನೂತನ ನಿಯಮ
Update: 2016-03-29 23:35 IST
ಜಿದ್ದಾ, ಮಾ. 29: ಸೌದಿ ಅರೇಬಿಯನ್ ಜನರಲ್ ಇನ್ವೆಸ್ಟ್‌ಮೆಂಟ್ ಅತಾರಿಟಿ (ಎಸ್‌ಎಜಿಐಎ) ವಿದೇಶಿ ಹೂಡಿಕೆ ನಿಯಂತ್ರಣಗಳನ್ನು ಬದಲಾಯಿಸಿದೆ. ಇದರ ಪ್ರಕಾರ, ಈ ಕಂಪೆನಿಗಳ 75 ಶೇಕಡ ಉದ್ಯೋಗಗಳನ್ನು ಸೌದಿ ರಾಷ್ಟ್ರಿಯರಿಗೆ ನೀಡಬೇಕಾಗಿದೆ.
ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವಲ್ಲಿ ವಿದೇಶಿ ಹೂಡಿಕೆಗಳು ಪ್ರಮುಖ ಪಾತ್ರವನ್ನು ವಹಿಸುವುದನ್ನು ಖಾತರಿಪಡಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನೂತನ ನಿಬಂಧನೆಗಳ ಪ್ರಕಾರ, ಕಂಪೆನಿಯೊಂದು ಕನಿಷ್ಠ 50 ಸಿಬ್ಬಂದಿ ಹೊಂದಿರಬೇಕು. ಇದನ್ನು ಸಾಧಿಸಲು ಎರಡು ವರ್ಷಗಳ ಗಡುವು ನೀಡಲಾಗಿದೆ.