×
Ad

ವಸತಿ ಸಂಕೀರ್ಣದಲ್ಲಿ ಭಾರೀ ಅಗ್ನಿ ಆಕಸ್ಮಿಕ: ನಿವಾಸಿಗಳ ಸುರಕ್ಷಿತ ತೆರವು

Update: 2016-03-29 23:44 IST

ಅಜ್ಮಾನ್, ಮಾ.29: ಯುಎಇನ ಅಜ್ಮಾನ್ ನಗರದಲ್ಲಿ ಸೋಮವಾರ ಎರಡು ವಸತಿ ಕಟ್ಟಡಗಳಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು,ಅಗ್ನಿಶಾಮಕ ಪಡೆಗಳ ಸಕಾಲಿಕ ಕಾರ್ಯಾಚರಣೆಯಿಂದಾಗಿ ಭಾರೀ ದುರಂತವೊಂದು ತಪ್ಪಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಅಜ್ಮಾನ್ ಒನ್ ಡೆವಲಪ್‌ಮೆಂಟ್ ವಸತಿ ಸಂಕೀರ್ಣದಲ್ಲಿ ಈ ಅವಘಡ ಸಂಭವಿಸಿದೆ.
 ಅಗ್ನಿಅನಾಹುತಕ್ಕೀಡಾದ ಎರಡು ವಸತಿಕಟ್ಟಡಗಳಿಂದ ನಿವಾಸಿಗಳನ್ನು ಕೂಡಲೇ ತೆರವುಗೊಳಿಸಲಾಗಿದೆ. ದಟ್ಟವಾದ ಹೊಗೆಯಲ್ಲಿ ಸಿಲುಕಿಕೊಂಡ ಕಾರಣ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಹಾಗೂ ಇನ್ನು ಕೆಲವರಿಗೆ ಸಣ್ಣಪುಟ್ಟಗಾಯಳಾಗಿರುವುದಾಗಿ ತಿಳಿದುಬಂದಿದೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರ ಬೆಳಗ್ಗಿನ ವೇಳೆಗೆ ಎರಡೂ ವಸತಿಕಟ್ಟಡಗಳಲ್ಲಿ ಹರಡಿದ ಅಗ್ನಿಯನ್ನು ನಂದಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿ ಯಾಗಿದೆಯೆಂದು ಅಜ್ಮಾನ್ ನಾಗರಿಕ ರಕ್ಷಣಾ ಇಲಾಖೆ ಯ ಮೂಲಗಳು ತಿಳಿಸಿವೆ. ಅಗ್ನಿ ಆಕಸ್ಮಿಕಕ್ಕೆ ಕಾರಣವೆಂದು ತಕ್ಷಣವೇ ತಿಳಿದುಬಂದಿಲ್ಲ. ಅಜ್ಮಾನ್ ಡೆವಲಪ್‌ಮೆಂಟ್ ಒನ್ 12 ಕಟ್ಟಡಗಳಿರುವ ಬೃಹತ್ ವಸತಿ ಸಂಕೀರ್ಣವಾಗಿದೆ. ಯುಎಇನಲ್ಲಿ ಕಳೆದ ಮೂರು ವರ್ಷಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ನಾಲ್ಕನೆ ಅತಿ ದೊಡ್ಡ ಅಗ್ನಿ ಅನಾಹುತ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News