ಗೋದ್ರದಲ್ಲಿ ಸೇರಿದ 2 ಲಕ್ಷ ಮುಸ್ಲಿಮರು! ನಮ್ಮಿಂದ ಮತ್ತೆ ಬಲಿದಾನ ಕೇಳಲಾಗುತ್ತಿದೆ ಎಂದ ಮಹ್ಮೂದ್ ಮದನಿ!

Update: 2016-03-30 10:15 GMT

ಗೋಧ್ರಾ, ಮಾರ್ಚ್.30: ಜಮೀಯತ್ ಉಲಮಾಯೆ ಹಿಂದ್ ಇದರ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹ್ಮೂದ್ ಮದನಿ ಮುಸ್ಲಿಮರು ದೇಶದ ಸ್ವಾತಂತ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ದೇಶದ ಮುಸ್ಲಿಮರು ಬೈಜೊಯ್ಸ್ ಭಾರತೀಯರಾಗಿದ್ದಾರೆ. ಗೋದ್ರದ ಜಮೀಯತ್ ಉಲಮಾಯೆ ಹಿಂದ್ ಕಾನ್ಫ್ರೆಸ್‌ನಲ್ಲಿ ಮದನಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಕಾನ್ಫ್ರೆಸ್‌ನಲ್ಲಿ ಸುಮಾರು ಎರಡು ಲಕ್ಷ ಮುಸ್ಲಿಮರು ಸೇರಿದ್ದರೆಂಬುದಾಗಿ ವರದಿಗಳು ತಿಳಿಸಿವೆ. ಸಾಮಾಜಿಕ ಕಾರ್ಯಕರ್ತ ಸ್ವಾಮೀ ಅಗ್ನಿವೇಶ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮದನಿ"ನಾವು ದೇಶದ ಸಂಘರ್ಷದ ಪಾಲುದಾರರಾಗಿದ್ದೇವೆ. ಆದರೆ ನಮ್ಮೊಂದಿಗೆ ಬಾಡಿಗೆದಾರರಂತೆ ವರ್ತಿಸಲಾಗುತ್ತಿದೆ. ಇದು ನಮ್ಮ ದೇಶವಾಗಿದೆ ಮತ್ತು ಇದು ನಮ್ಮ ಭೂಮಿಯಾಗಿದೆ ನಾವು ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದೇವೆ. ಈಗ ಮತ್ತೊಮ್ಮೆ ಬಲಿದಾನವನ್ನು ಕೇಳಲಾಗುತ್ತಿದೆ" ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದಕ್ಕಿಂತ ಮೊದಲು ಅವರು ಪತ್ರಕರ್ತರೊಂದಿಗೆ ಮಾತಾಡಿದ್ದು"ಒಂದು ಸಮುದಾಯ ಅಸುರಕ್ಷಿತತೆಯನ್ನು ಅನುಭವಿಸುತ್ತಿದೆ. ಇಂತಹ ಸ್ಥಿತಿ ಜನರ ಮನಸಿನಲ್ಲಿ ಹುಟ್ಟಿಕೊಳ್ಳುವುದು ಉತ್ತಮ ವಿಚಾರವಲ್ಲ" ಎಂದುಹೇಳಿದ್ದಾರೆ. ಮುಸ್ಲಿಮರ ಮೀಸಲಾತಿ ಕುರಿತಂತೆ ಅವರು ಮೀಸಲಾತಿಯಿಂದ ಪರಿಸ್ಥಿತಿಯಲ್ಲಿ ಬದಲಾವಣೆಯಾಗದು. ನಮಗೆ ದೇಹದ ಹಸಿವೆ ಇರಬೇಕು. ನಾನೀವತ್ತಿಗೂ ನೋಡುತ್ತಿದ್ದೇನೆ. ಮುಸ್ಲಿಂ ಯುವಕ ಏಳುವಾಗ ಜಗತ್ತಿನ ಹಲುವೇಳೆಯ ಅರ್ಧ ಕೆಲಸ ಮುಗಿದಿರುತ್ತದೆ. ಸರಕಾರ ಬದಲಾಗುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿ ಬದಲಾಗಬೇಕಿದ್ದರೆ ಸ್ವಯಂ ತಮ್ಮನ್ನು ಬದಲಿಸಿಕೊಳ್ಳಬೇಕು ಎಂದು ಮದನಿ ಹೇಳಿರುವುದಾಗಿ ವರದಿಯಾಗಿವೆ.

 ಸ್ವಾಮಿ ಅಗ್ನಿವೇಶ್ ಬಿಜೆಪಿ ಸರಕಾರದ ವಿರುದ್ಧ ಟೀಕಾಪ್ರಹಾರವನ್ನು ಹರಿಸುತ್ತಾ" ಅವರು ಭಾರತ್ ಮಾತಾಕಿ ಜೈ ಹೇಳುವುದು ಅಥವಾ ಹೇಳದಿರುವುದರ ಆಧಾರದಲ್ಲಿ ನಮಗೆ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ನಾವು ಯಾಕೆ ಭಾರತ್ ಮಾತಾಕಿ ಜೈ ಎಂದು ಹೇಳಬೇಕು. ನೀವು ಪ್ರತಿಯೊಂದು ಮಾತಿಗೂ ಜೈ ಎನ್ನುತ್ತಿದ್ದೀರಿ. ಮಲ್ಯಾಕಿಜೈ, ಒಬ್ಬ ಶರಾಬು ವ್ಯಾಪಾರಿ ದೇಶದ ಸಾವಿರಾರು ಕೋಟಿ ರೂ. ತಿಂದು ಓಡಿಹೋಗಿದ್ದಾನೆ. ವಿತ್ತ ಸಚಿವ ಜೇಟ್ಲಿ ಪ್ರಧಾನಿ ಮೋದಿ ವಿಜಯ್ ಮಲ್ಯರ 9000 ಕೋಟಿ ರೂ. ಸಾಲದ ಬಗ್ಗೆ ಏನು ಯೋಚಿಸುತ್ತಿದ್ದರು? ಅವರ ವಿರುದ್ಧ ಯಾಕೆ ದೇಶದ್ರೋಹ ಪ್ರಕರಣ ದಾಖಲಿಸಿಲ್ಲ ಅವರನ್ನು ದೇಶದ್ರೋಹಿ ಎನ್ನಲಿಲ್ಲ. ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯಾ ಕುಮಾರ್‌ರ ವಿರುದ್ಧ ದೇಶದ್ರೋಹ ಪ್ರಕರಣದಾಖಲಿಸಲಾಯಿತು. ಈ ದೇಶದಲ್ಲಿ ಏನು ನಡೆಯುತ್ತಿದೆ" ಎಂದು ಕುಟುಕಿದ್ದಾರೆ. ಅವರು ಗೋದ್ರಾದ ಸಾಬರಮತಿ ರೈಲು ಬೆಂಕಿಪ್ರಕರಣವನ್ನು ಪ್ರಸ್ತಾಪಿಸಿ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ವಿಆರ್ ಕೃಷ್ಣ ಅಯ್ಯರ್ ಅಧ್ಯಕ್ಷತೆಯ ಕಮಿಟಿ ಬೆಂಕಿ ಹೊರಗಿನಿಂದ ಬಿದ್ದಿಲ್ಲ ಎಂದು ಹೇಳಿತ್ತು. ಈ ಅವಘಡದ ಹಿಂದೆ ಯಾರ ಕೈಗಳಿವೆ ಅವರ ಮೇಲೆ ಕೇಸು ದಾಖಲಿಸಬೇಕಾಗಿದೆ ಎಂದು ಅಗ್ನಿವೇಶ್ ಹೇಳಿದರು ಎಂದು ವರದಿಯಾಗಿದೆ. ಸಾಬರಮತಿ ರೈಲು ಬೆಂಕಿ ನಂತರ ಗೋದ್ರ ಗಲಭೆ ಭುಗಿಲೆದ್ದಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News