×
Ad

ಭಟ್ಕಳ: ಹೊಗೆವಡ್ಡಿ ವೀರಾಂಜನೇಯ ದೇವಸ್ಥಾನ ಪ್ರಸಿದ್ದ ಕ್ಷೇತ್ರವಾಗಲಿದೆ - ಅನಂತ ನಾಯ್ಕ

Update: 2016-03-30 18:30 IST

ಭಟ್ಕಳ:ತಾಲ್ಲೂಕಿನ ಹಾಡುವಳ್ಳಿ ಸಮೀದ ಹೊಗೆವಡ್ಡಿ ಗ್ರಾಮದಲ್ಲಿ ಇತ್ತೀಚೆಗಷ್ಟೆ ಪುನರ್ ಪ್ರತಿಷ್ಠಾಪನೆಗೊಂಡ ವೀರಾಂಜನೆಯ ದೇವಸ್ಥಾನವು ಮುಂದಿನ  ದಿನಗಳಲ್ಲಿ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಲಿದೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಉಗ್ರಾಣಿಮನೆ ಅನಂತ ನಾಯ್ಕ ಹೇಳಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇವರ ಪುನರ್ ಪ್ರತಿಷ್ಠೆಯ ಜತೆಗೆ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಕೆಳದಿ ಸಂಸ್ಥಾನದ ಮಂತ್ರಿ ತಿಮ್ಮಣ್ಣ ನಾಯ್ಕರ ಪ್ರತಿಮೆ ಅನಾವರಣವನ್ನು ಧಾರ್ಮಿಕ ವಿಧಿ ಮೂಲಕ ಅದ್ದೂರಿಯಾಗಿ ನಡೆಸಲಾಗಿದೆ.ಈ ಒಂದು ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯರು,ಭಟ್ಕಳದ ಭಕ್ತಜನರು ತುಂಬು ಹೃದಯದಿಂದ ಸಹಕರಿಸಿದ್ದಾರೆ ಎಂದರು.

ಹೊಗೆವಡ್ಡಿ ವೀರಾಂಜನೇಯ ದೇವಸ್ಥಾನದಲ್ಲಿ ದಿನಂಪ್ರತಿ ಪೂಜೆ ನಡೆಯಲಿದ್ದು,ಶನಿವಾರ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ.ಹೊಗೆವಡ್ಡಿ ಕ್ಷೇತ್ರದ ಸಮಗ್ರ ಪರಿಚಯ ಹಾಗೂ ತಿಮ್ಮಣ್ಣನಾಯ್ಕರ ಇತಿಹಾಸ ದರ್ಶನದ ಪುಸ್ತಕವನ್ನೂ ಬಿಡುಗಡೆ ಮಾಡಲಾಗಿದೆ.ಕ್ಷೇತ್ರದ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ ಎಂದರು.ಪ್ರಮುಖರಾದ ಗಂಗಾಧರ ನಾಯ್ಕ,ಯಶೋಧರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News