×
Ad

ಎ.ಪಿ. ಗೌತಮ್‌ಗೆ ರಾಷ್ಟ್ರ ಮಟ್ಟದ ವಿದ್ಯಾರ್ಥಿ ವೇತನ

Update: 2016-03-30 18:52 IST

 ಪುತ್ತೂರು: ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ನಡೆಸುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್(ಕೆವಿಪಿವೈ) ಯೋಜನೆಯ ಪರೀಕ್ಷೆಯ ದ್ವಿತೀಯ ಹಂತದ ಮೌಖಿಕ ಸುತ್ತಿನಲ್ಲಿ ತೇರ್ಗಡೆಯಾಗಿ ರಾಷ್ಟ್ರ ಮಟ್ಟದ ವಿದ್ಯಾರ್ಥಿ ವೇತನ ಪಡೆಯಲು ಪುತ್ತೂರಿನ ಎ.ಪಿ. ಗೌತಮ್ ಅವರು ಆಯ್ಕೆಯಾಗಿದ್ದಾರೆ.

ಮೂಲಭೂತ ವಿಜ್ಞಾನದಲ್ಲಿ ಶಿಕ್ಷಣವನ್ನು ಮುಂದುವರಿಸಿದರೆ ವಾರ್ಷಿಕ ರೂ. 1 ಲಕ್ಷದಷ್ಟು ವಿದ್ಯಾತಿ ವೇತನವನ್ನು ಪಡೆಯುವುದರೊಂದಿಗೆ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಎಜುಕೇಶನ್ ಎಂಡ್ ರಿಸರ್ಚ್ ಸಂಸ್ಥೆಗಳಲ್ಲಿ ಇಂಟರ್‌ಗ್ರೇಟೆಡ್ ಎಮ್ಮೆಸ್ಸಿ ಶಿಕ್ಷಣವನ್ನು ಪಡೆಯಲು ಅರ್ಹತೆ ಪಡೆದ ಇವರು ವಿವೇಕಾನಂದ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಪುತ್ತೂರಿನ ಸಂತಫಿಲೋಮಿನಾ ಕಾಲೇಜ್‌ನ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ರಾಧಾಕೃಷ್ಣ ಮತ್ತು ಸೀತಾಲಕ್ಷ್ಮಿ ದಂಪತಿ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News