×
Ad

ಭಟ್ಕಳ: ಸೂಸೂತ್ರವಾಗಿ ಜರಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ

Update: 2016-03-30 19:35 IST

ಭಟ್ಕಳ: ತಾಲೂಕಿನ 8 ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಆರಂಭವಾದ ಎಸ್.ಎಸ್.ಎಲ್.ಸಿ ಪ್ರಥಮ ಭಾಷೆ ಪರೀಕ್ಷೆಯು ಸೂಸೂತ್ರವಾಗಿ ನಡೆದಿದ್ದು ಯಾವುದೇ ಅಕ್ರಮ ಚಟುವಟಿಕೆ ನಡೆದಿಲ್ಲ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದ ಮೂಲಗಳು ತಿಳಿಸಿವೆ.

ಭಟ್ಕಳ ತಾಲೂಕಿನಲ್ಲಿಒಟ್ಟು 39 ಪ್ರೌಢಶಾಲೆಗಳಲ್ಲಿ 14 ಸರ್ಕಾರಿ, 11 ಅನುದಾನಿತ ಹಾಗೂ 14 ಅನುದಾನರಹಿತ ಶಾಲೆಗಳಿಂದ ಒಟ್ಟು 2339 ವಿದ್ಯಾರ್ಥಿಗಳು ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನುಎದುರಿಸುತ್ತಿದ್ದಾರೆ.1141 ವಿದ್ಯಾರ್ಥಿಗಳು, 1198 ವಿದ್ಯಾರ್ಥಿನೀಯರು ಪರೀಕ್ಷೆಯನ್ನು ಬರೆಯಲಿದ್ದಾರೆ.ರೆಗುಲರ್(ಫ್ರೆಶ್) 1117 ಗಂಡು, ಹಾಗೂ 1183 ಹೆಣ್ಣು ವಿದ್ಯಾರ್ಥಿಗಳಿದ್ದು 24 ಗಂಡು, 15 ಹೆಣ್ಣು ವಿದ್ಯಾರ್ಥಿಗಳು ರಿಪಿಟರ್‌ಆಗಿದ್ದಾರೆ. ಪರೀಕ್ಷೆಗಳು ಸುಸೂತ್ರಜರಗಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದು 163 ಪರೀಕ್ಷಾ ಸೂಪರ್‌ವೈಸರ್ಸ್‌, 16 ಸಿಟಿಂಗ್ ಸ್ಕ್ವಾಡ್ ಗಳನ್ನು ನೇಮಿಸಿದ್ದಾರೆ.ಅಲ್ಲದೆ ತಾಲೂಕಿನಎಲ್ಲ ಮುಖ್ಯೋಪಾಧ್ಯಾಯರಗಳನ್ನು ಮೇಲ್ವಿಚಾರಕನ್ನಾಗಿ ನೇಮಿಸಲಾಗಿದೆ.

35ವಿದ್ಯಾರ್ಥಿಗಳು ಗೈರು:ಇಂದು ನಡೆದ ಪ್ರಥಮ ಭಾಷೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 23ಗಂಡು, 12 ಹೆಣ್ಣು ಸೇರಿಒಟ್ಟು 35 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಎಂದು ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಲಯದ ಮೂಲಗಳು ದೃಢಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News