×
Ad

ಕಾಸರಗೋಡು : ಎಸ್ ಎಸ್ ಎಫ್ ವತಿಯಿಂದ ಧರ್ಮಜಾಗರಣ ಯಾತ್ರೆ

Update: 2016-03-30 19:56 IST

ಕಾಸರಗೋಡು : ಎಸ್  ಎಸ್  ಎಫ್  ವತಿಯಿಂದ ಧರ್ಮಜಾಗರಣ  ಯಾತ್ರೆ  ಎಪ್ರಿಲ್ ಒಂದರಂದು ರಾಜ್ಯದ  ಎರಡು ಕೇಂದ್ರಗಳಿಂದ  ಹೊರಡಲಿದೆ. ರಾಜ್ಯ ಅಧ್ಯಕ್ಷ  ಎನ್ . ವಿ ಅಬ್ದುಲ್ ರಜಾಕ್ ಸಖಾಫಿ ನೇತ್ರತ್ವದ  ಉತ್ತರ ವಲಯ  ಯಾತ್ರೆ  ಸಂಜೆ ಮೂರು ಗಂಟೆಗೆ ಉಪ್ಪಳ  ದಿಂದ  ಪ್ರಯಾಣ ಬೆಳೆಸಲಿದ್ದು , ಸಮಸ್ತ ಕೇಂದ್ರ  ಮುಶಾವರ ಸದಸ್ಯ ಬೇಕಲ ಇಬ್ರಾಹಿ೦ ಮುಸ್ಲಿಯಾರ್  ಜಾಥಾ ನಾಯಕನಿಗೆ ಧ್ವಜ ಹಸ್ತಾ೦ತರಿಸಿ  ಉದ್ಘಾಟಿಸುವರು. 

ಎರ್ನಾಕುಲ೦ ನ ನೆಲ್ಲಿಕುಯಿ ಯಿಂದ ಹೊರಡುವ  ಮಧ್ಯ  ವಲಯ ಜಾಥಾ  ವನ್ನು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್  ವಹಿಸಲಿದ್ದು ,  ಮಾರ್ಚ್ ೩೧ ರಂದು  ಕೊಚ್ಚಿ ಮರೈನ್ ಡ್ರೈವ್ ನಲ್ಲಿ ನಡೆಯುವ  ಸಮಾರಂಭದಲ್ಲಿ  ಕಾಂತಾಪುರ ಎ .ಪಿ ಅಬೂಬಕ್ಕರ್ ಮುಸ್ಲಿಯಾರ್  ಚಾಲನೆ ನೀಡುವರು . ಉತ್ತರ ವಲಯ ಜಾಥಾಕ್ಕೆ  ಜಿಲ್ಲೆಯ ಉಪ್ಪಳ ,  ಮುಲ್ಳೆರೀಯ , ಕುಂಡಕುಯಿ ,  ಕಾನ್ಚಾ೦ಗಾಡ್  ಚೆರ್ವತ್ತೂರು ಮೊದಲಾದೆಡೆ ಸ್ವಾಗತ ನೀಡಲಾಗುವುದು . 

ಎರಡೂ  ಜಾಥಾಗಳು ಎಪ್ರಿಲ್ ಎಂಟರಂದು ಸಂಜೆ ನಾಲ್ಕು ಗಂಟೆಗೆ   ಕೋಜಿಕ್ಕೋಡು  ಜಿಲ್ಲೆಯ  ಫರೂಕ್ ಚು೦ಗತ್ ನಲ್ಲಿ  ಸಂಗಮಿಸಿ  ರಾಮನಟಕರದಲ್ಲಿ  ಕೊನೆಗೊಳ್ಳಲಿದೆ.

 ಸಮಾರೋಪ ಸಮ್ಮೇಳನವನ್ನು   ಕಾಂತಾಪುರ ಎ . ಪಿ ಅಬೂಬಕ್ಕರ್ ಮುಸ್ಲಿಯಾರ್  ಉದ್ಘಾಟಿಸುವರು. ಸಯ್ಯದ್ ಇಬ್ರಾಹಿ೦  ಖಲಿಳುಲ್  ಅಧ್ಯಕ್ಷತೆ ವಹಿಸುವರು . ಈ ಕುರಿತು ಕರೆದ  ಸುದ್ದಿಗೋಷ್ಠಿಯಲ್ಲಿ  ರಾಜ್ಯ  ಪ್ರಧಾನ ಕಾರ್ಯದರ್ಶಿ  ಜಾಫರ್ ಸಾದಿಕ್ ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲಾಹುದ್ದೀನ್ ಅಯ್ಯೋಡಿ , ಉಮ್ಮರುಲ್ ಫಾರೂಕ್   ಉಪಸ್ಥಿತರಿದ್ದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News