ಲಂಡನ್ ಬೀದಿಯಲ್ಲಿ ಸೌದಿ ಶ್ರೀಮಂತನ ಚಿನ್ನದ ಕಾರುಗಳ ಪ್ರದರ್ಶನ

Update: 2016-03-30 16:55 GMT

"London's streets are paved with gold ( ಲಂಡನ್ ಬೀದಿಗಳು ಸ್ವರ್ಣ ಲೇಪಿತವಾಗಿವೆ) " ಎಂಬ ಹಳೆ ಮಾತೊಂದಿದೆ. ಆದರೆ ಈ ವಾರ ಆ ಮಾತು ನಿಜವಾಗಿದೆ ! 

ಮೊನ್ನೇ ಇದ್ದಕ್ಕಿದ್ದಂತೆ ಲಂಡನ್ ನ ಡಬಲ್ ಡೆಕ್ಕರ್ ಬಸ್ಸುಗಳು , ಕಪ್ಪು ಟ್ಯಾಕ್ಸಿಗಳ ನಡುವೆ ನಾಲ್ಕು  ಚಿನ್ನದ ಕಾರುಗಳು ಒಂದರ ಹಿಂದೆ ಒಂದರಂತೆ ಬಂದವು ! ಇವು ಲಂಡನ್ ಭೇಟಿಗೆ ಬಂಡ ಸೌದಿಯ ಆಗರ್ಭ ಶ್ರೀಮಂತ ವ್ಯಕ್ತಿಯದ್ದೆಂದು ಹೇಳಲಾಗಿದೆ. ಈ ವಿಲಾಸಿ ಚಿನ್ನ ಲೇಪಿತ ಕಾರುಗಳು 1.8 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಮೌಲ್ಯದವು ಎಂದು ಹೇಳಲಾಗಿದೆ . ಈ ಪೈಕಿ ಒಂದು ಬೃಹತ್ ಆರು ಚಕ್ರಗಳ ಮರ್ಸಿಡಿಸ್ ಕಾರಿಗೆ 534,000 ಡಾಲರ್ ಬೆಲೆ ! 

ಇವುಗಳಲ್ಲಿ ಗಂಟೆಗೆ  349 ಕಿ ಮಿ ಕ್ರಮಿಸುವ ಒಂದು ಲ್ಯಾಮ್ಬೊರ್ಗಿನಿಯ ಬೆಲೆ 506,000 ಡಾಲರ್ ಗಳು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News