×
Ad

ಬಾಳಿಗಾ ಹತ್ಯೆ ಪ್ರಕರಣ : ಶಂಕಿತ ಆರೋಪಿಗಳ ಪತ್ತೆಗೆ ಸಹಕರಿಸಲು ಮನವಿ

Update: 2016-03-30 22:54 IST

ಮಂಗಳೂರು, ಮಾ. 30: ಕೊಡಿಯಾಲ್‌ಬೈಲ್‌ನ ಪಿವಿಎಸ್ ಬಳಿ ಕೊಲೆಗೀಡಾಗಿರುವ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆ ಪ್ರಕರಣ ಶಂಕಿತ ಆರೋಪಿಗಳಾದ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಭಜನಾ ಮಂದಿರ ಬಳಿಯ ನಿವಾಸಿ ಶಿವ (29) ಮತ್ತು ಕಾವೂರಿನ ಶಾಂತಿನಗರ ಮೈದಾನ ಬಳಿಯ ನಿವಾಸಿ ಶ್ರೀಕಾಂತ್ (40) ಅವರ ಪತ್ತೆಗೆ ಸಹಕರಿಸುಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ವಿನಾಯಕ ಪಾಂಡುರಂಗ ಬಾಳಿಗಾ ಅವರನ್ನು ದುಷ್ಕರ್ಮಿಗಳು ಮಾರ್ಚ್ 21ರಂದು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಾರ್ಚ್ 27ರಂದು ವಿನೀತ್ ಪೂಜಾರಿ ಮ್ತು ನಿಶಿತ್ ದೇವಾಡಿಗ ಎಂಬಿಬ್ಬರನ್ನು ಬಂಧಿಸಿದ್ದರು. ಇದೀಗ ಈವರೆಗಿನ ತನಿಖೆ ಹಾಗೂ ದೊರೆತಿರುವ ಸಾಕ್ಷಾಧಾರಗಳಿಂದ ವಿಚಾರಣೆಗೊಳಪಡಿಸಬೇಕಾದ ಈ ಇಬ್ಬರು ಶಂಕಿತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಸುಳಿವು ಲಭ್ಯವಾದಲ್ಲಿ ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ದೂರವಾಣಿ ಸಂಖ್ಯೆ 9480805320 ಸಂಖ್ಯೆಗೆ ಕರೆಯ ಮೂಲಕ ಅಥವಾ ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News