ನಾಳೆಯಿಂದ ಕಲ್ಪಾದೆಯಲ್ಲಿ ಸ್ವಲಾತ್ ಮಜ್ಲಿ್
ಮಂಗಳೂರು, ಮಾ.30: ಬೆಳ್ಮ ಕಲ್ಪಾದೆಯ ಮುಹಿಯುದ್ದೀನ್ ಜುಮಾ ಮಸ್ಜಿದ್, ನೂರುಲ್ ಹುದಾ ಮದ್ರಸದ 6ನೆ ಸ್ವಲಾತ್ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ ಪ್ರವಚನ ಹಾಗೂ ಸ್ವಲಾತ್ ಮಜ್ಲಿಸ್ ಮತ್ತು ಸುನ್ನಿ ಸಮಾವೇಶ ಎ.1,2,3 ರಂದು ಮರ್ಹೂಂ ತಸ್ಲೀಂ ಸಖಾಫಿ ವೇದಿಕೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಎ.1ರಂದು ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮಾಡಲಿದ್ದು, ಕೃಷ್ಣಾಪುರ ಸಂಯುಕ್ತ ಖಾಝಿ ಇ.ಕೆ. ಇಬ್ರಾಹೀಂ ಮದನಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಎ.2 ರಂದು ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್‌ಉಪನ್ಯಾಸ ನೀಡಲಿದ್ದಾರೆ. ಎ.3ರಂದು ಅಸರ್ ನಮಾಝ್ ನಂತರ ಸ್ವಲಾತ್ ಮಜ್ಲಿಸ್ ಹಾಗೂ ಮಗ್ರಿಬ್ ನಮಾಝ್ ಬಳಿಕ ಸುನ್ನಿ ಸಮಾವೇಶ ನಡೆಯಲಿದೆ ಎಂದರು.
ಸ್ವಲಾತ್ ಮಜ್ಲಿಸ್‌ನ ನೇತೃತ್ವವನ್ನು ಸಯ್ಯಿದ್ ಅಶ್ರಫ್ ತಂಙಳ್ ಅಸ್ಸಖಾಫ್ ಅದೂರುರವರು ವಹಿಸಲಿದ್ದಾರೆ. ದ.ಕ. ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಕೂಟು ಪ್ರಾರ್ಥನೆ ಮಾಡಲಿದ್ದಾರೆ. ಸುನ್ನಿ ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿ ಇಬ್ರಾಹೀಂ ಅಲ್ ಖಾಸಿಮಿ ನೆಕ್ರಾಜೆ ಕಾಸರಗೋಡು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಖತೀಬ್ ಶಾಹುಲ್ ಹಮೀದ್, ಅಬ್ದುರ್ರಝಾಕ್ ಕಲ್ಪಾದೆ, ಡಿ.ಐ.ಅಬೂಬಕರ್, ರಫೀಕ್ ಅಮ್ಜದಿ ಮಾವಿನಕಟ್ಟೆ ಉಪಸ್ಥಿತರಿದ್ದರು.