×
Ad

ನಾಳೆ ಎನ್‌ಪಿಎಸ್ ಸರಕಾರಿ ನೌಕರರಿಂದ ಕರಾಳ ದಿನಾಚರಣೆ

Update: 2016-03-30 23:51 IST

ಪುತ್ತೂರು, ಮಾ.30: 2006ರ ನಂತರ ನೇಮಕಗೊಂಡಿರುವ ಎಲ್ಲ ಇಲಾಖೆಗಳ ಸರಕಾರಿ ನೌಕರರಿಗಾಗಿ ಜಾರಿಗೊಳಿಸಲಾಗಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು (ಡಿಪಿಎಸ್) ರದ್ದುಗೊಳಿಸಿರುವುದನ್ನು ವಿರೋಧಿಸಿ ಎ.1ರಂದು ಕಪ್ಪುಪಟ್ಟಿ ಧರಸಿ ಕರ್ತವ್ಯ ನಿರ್ವಹಿಸುವ ಮೂಲಕ ಕರಾಳ ದಿನ ಆಚರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕ್ಯಾತಲಿಂಗ ಸಿದ್ರಾಮ ಕ್ಯಾತನವರ, ಆದರ್ಶ, ದಿನೇಶ್ ಮಾಚಾರ್, ಸುರೇಶ್, ನೀತಾ ಗಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News