ಮಣ್ಣು ಸಾಗಾಟ: ಪಾವಂಜೆ ನದಿ ತೀರದ ರಸ್ತೆಗೆ ಹಾನಿ: ಗ್ರಾಮಸ್ಥರ ಆರೋಪ
ಮುಲ್ಕಿ, ಮಾ.30: ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಪಾವಂಜೆ ನಂದಿನಿ ನದಿ ತಟದ ಅರಂದ್ ಎಂಬಲ್ಲಿ ವಾಸ ವಾಗಿರುವ 50 ಕುಟುಂಬಗಳಿಗೆ ಸಹ ಕಾರಿಯಾಗಲೆಂದು ದಾನಿಯೊಬ್ಬರು ನೀಡಿದ್ದ ಸ್ಥಳದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಸ್ತೆಯಲ್ಲಿ ಹಗಲು ಇರುಳೆನ್ನದೆ ಮಣ್ಣು ಸಾಗಾಟ ಮಾಡುತ್ತಿದ್ದ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನದಿಗೆ ಕುಸಿದು ಬೀಳುವ ಹಂತ ತಲುಪಿದೆ.
ಸ್ಥಳೀಯರೊಬ್ಬರು ರೆಡ್ಡಿಗಳಿಗೆ ಮಾರಾಟ ಮಾಡಿ ರುವ ನಿವೇಶನಕ್ಕೆ ಮಣ್ಣು ತುಂಬಿಸುವ ಕಾರ್ಯದಲ್ಲಿ ತೊಡಗಿರುವ ಬೃಹದಾಕಾರದ ಲಾರಿಗಳು ಹಗಲಿರುಳೆನ್ನದೆ ಓಡಾಡು ತ್ತಿರುವ ಪರಿಣಾಮ ಸಚಿವ ಅಭಯ ಚಂದ್ರ ಜೈನ್‌ರ ಮೀನುಗಾರಿಕಾ ಇಲಾ ಖೆಯ ಅನುದಾನದಿಂದ ಅರಂದ್- ಸಸಿಹಿತ್ಲು 1.5 ಕಿ.ಮಿ. ಉದ್ದದ ರಸ್ತೆ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಡಾಮರೀ ಕರಣ ಗೊಂಡಿತ್ತು.
ರಾ.ಹೆ. 66ರ ಪಕ್ಕದಿಂದ ಆರಂಭ ಗೊಳ್ಳುವ ಅರಂದ್ - ಸಸಿಹಿತ್ಲು ರಸ್ತೆ ಡಾಮರೀಕರಣದ ಬಳಿಕ ಹೆದ್ದಾರಿ ಪ್ರಾಧಿಕಾರ ಪಾವಂಜೆ ನಂದಿನಿ ನದಿಗೆ ನೂತನ ಸೇತುವೆ ನಿರ್ಮಾಣ ಮಾಡುವ ಸಮಯದಲ್ಲಿ ನದಿಗೆ ಅಡ್ಡವಾಗಿ ಮಣ್ಣು ತುಂಬಿ ಕಾಮಗಾರಿ ನಡೆಸಿ ದ್ದರು. ಸೇತುವೆ ನಿರ್ಮಾಣದ ಬಳಿಕ ಮಣ್ಣು ತೆರವುಗೊಳಿಸಿ ಒಂದೇ ಬಾರಿ ನೀರು ಹರಿಸಿದ ಪರಿಣಾಮವಾಗಿ ರಸ್ತೆ ಕೆಟ್ಟುಹೋಗಿತ್ತು. ಅನಿಯಮಿತವಾಗಿ ಲಾರಿಗಳು ಇದೇ ರಸ್ತೆಯಲ್ಲಿ ಮಣ್ಣು ತುಂಬಿ ರಾತ್ರಿ ಹಗಲೆನ್ನದೆ ಸಂಚರಿಸಿದ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಿಗರು ಮತ್ತು ಸಾರ್ವಜನಿಕರು ಓಡಾಡಲು ಭೀತಿ ಪಡುವಂತಾಗಿದೆ
ಜಿಪಂ ಸದಸ್ಯ ವಿನೋದ್ ಬೊಳ್ಳೂರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸುವ ಭರವಸೆ ನೀಡಿದರು. ಈ ಸಂದರ್ಭ ತಾಪಂ ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಜಲಜಾ, ಪಿಡಿಒ ಅಬೂಬಕರ್, ಸದಸ್ಯರಾದ ವಸಂತ್ ಬೆರ್ನಾಡ್, ಸುಗಂಧಿ, ವಿನೋದ್ ಕೊಳುವೈಲು ಮತ್ತಿತರರು ಉಪಸ್ಥಿತರಿದ್ದರು.