×
Ad

ಬಿಐಟಿ ಕಾಲೇಜಿನಲ್ಲಿ ಉಪನ್ಯಾಸ

Update: 2016-03-30 23:56 IST

ಮಂಗಳೂರು, ಮಾ.30: ಬ್ಯಾರೀಸ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಸಂಸ್ಥೆಯಲ್ಲಿ ಭಾರತದ ಸಿವಿಲ್ ಇಂಜಿನಿಯರಿಂಗ್ ಸಲಹೆಗಾರರ ಮಂಗಳೂರು ಕೇಂದ್ರ, ಎಸಿಸಿ ಲಿಮಿಟೆಡ್ ಹಾಗೂ ಬಿಐಟಿ ಸಹಯೋಗದೊಂದಿಗೆ ಇಂಜಿನಿಯರಿಂಗ್ ಸಪ್ತಾಹ-2016ರ ಅಂಗವಾಗಿ ಎನ್‌ಐಟಿಕೆ ಸುರತ್ಕಲ್‌ನ ಸಿವಿಲ್ ಇಂಜಿನಿಯರ್ ವಿಭಾಗದ ಪ್ರೊ. ಸುಭಾಶ್ ಯಾರ್‌ಗಲ್ ‘ಕಾಂಕ್ರಿಟ್ ಮೂಲಕ ವಿವಿಧ ವಿನ್ಯಾಸ ನಿರ್ಮಾಣ’ದ ಬಗ್ಗೆ ತಾಂತ್ರಿಕ ಮಾಹಿತಿಯನ್ನೊಳಗೊಂಡ ಉಪನ್ಯಾಸ ನೀಡಿದರು.

ಬಿಐಟಿ ಪ್ರಾಂಶುಪಾಲ ಡಾ. ಫಾಲಾಕ್ಷಪ್ಪ ಸ್ವಾಗತಿಸಿದರು. ಅಸಿಸ್ಟೆಂಟ್ ಪ್ರೊ.ಆಫಿಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಬಿಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿ, ಎಸಿಸಿ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News