×
Ad

ಪುತ್ತೂರು: ಕನ್ನಡ ಸೇನೆಯಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

Update: 2016-03-31 17:36 IST

ಪುತ್ತೂರು: ಕನ್ನಡಸೇನೆಕರ್ನಾಟಕಇದರದ.ಕ. ಜಿಲ್ಲಾಸಮಿತಿ ವತಿಯಿಂದ ಗುರುವಾರ ಪುತ್ತೂರು ಸರ್ಕಾರಿ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸೇನೆ ಕರ್ನಾಟಕ ಇದರ ದ.ಕ.ಜಿಲ್ಲಾಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಎ, ಜಿಲ್ಲಾ ಗೌರವಸಲಹೆಗಾರ ವೃಷಭಆರಿಗ ಬೆಳ್ತಂಗಡಿ, ತಾಲೂಕು ಸಮಿತಿ ಅಧ್ಯಕ್ಷ ಚಂದ್ರಕಾಂತ ಅಡೂರು, ಪ್ರಧಾನಕಾರ್ಯದರ್ಶಿ ಕೆ.ಪಿ. ಇಬ್ರಾಹಿಂ, ಉಪಾಧ್ಯಕ್ಷ ಉಸ್ಮಾನ್‌ ಮರೀಲು, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್‌ ಕುಮಾರ್, ಪುತ್ತೂರು ಟ್ರಾಫಿಕ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ನಾಗರಾಜ್, ನಿವೃತ್ತ ಪೊಲೀಸ್‌ ಅಧಿಕಾರಿ ಪಿ. ಧರ್ಣಪ್ಪ ಗೌಡ ಹಿರೇಬಂಡಾರಿ, ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷ ದಿನೇಶ್‌ ಮೆದು, ನ್ಯಾಯವಾದಿಗಳಾದ ಚಿದಾನಂದ ಬೈಲಾಡಿ, ಮಹಾಬಲ ಗೌಡ, ಕೆ.ಎಂ.ಸಿದ್ದೀಕ್, ತೀರ್ಥ ಪ್ರಸಾದ್, ಕೈಲಾರು ಶ್ಯಾಮಪ್ರಸಾದ್, ಸಾಮಾಜಿಕ ಕಾರ್ಯಕರ್ತ ಚೇತನ್‌ ಕುಮಾರ್‌ ಕೆಮ್ಮಾಯಿ, ಹನೀಫ್‌ ಬಪ್ಪಳಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News