×
Ad

ಭಟ್ಕಳ: ಏ.5ರಿಂದ ಅಂಜುಮನ್ ತಾಂತ್ರಿಕ ಮಹಾವಿದ್ಯಾಯಲದಲ್ಲಿ ನೆಬುಲಸ್ ಫೆಸ್ಟ್

Update: 2016-03-31 18:11 IST

ಭಟ್ಕಳ : ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ & ಮ್ಯಾನೇಜ್ಮೆಂಟ್ ಮಹಾವಿದ್ಯಲಾಯವು ಏ.5 ರಿಂದ ಏ.7 ರ ವರೆಗೆ ಮೂರು ದಿನಗಳ ಕಾಲ ರಾಷ್ಟ್ರೀಯ ಮಟ್ಟದ ನೆಬುಲಸ್ ಟೆಕ್ನಿಕಲ್ ಫೆಸ್ಟ್-2016 ಆಯೋಜಿಸುವುದಾಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಶಿಮಜಿ ಮುಹಮ್ಮದ್ ಅನ್ಸಾರ್ ತಿಳಿಸಿದ್ದಾರೆ.

    ಅವರು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಡುತ್ತಿದ್ದರು. ಮೂರು ದಿನಗಳ ಕಾಲ ನಡೆಯುವ ಟೆಕ್ನಿಕಲ್ ಫೆಸ್ಟ್‌ನಿಂದ ಇಂಜಿನಿಯರಿಂಗ್ ಮತ್ತು ಮೆನೇಜ್‌ಮೆಂಟ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮಾಹಿತಿ ದೊರೆಯುವುದಲ್ಲದೇ, ಉತ್ತಮ ಮಾರ್ಗದರ್ಶನ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿಗಳನ್ನು ಕೂಡಾ ಆಹ್ವಾನಿಸಿ ಅವರೂ ಸಹ ಭಾಗವಹಿಸುವಂತೆ ಮಾಡಲು ಉತ್ಸುಕರಾಗಿದ್ದೇವೆ ಎಂದ ಅವರು ಮೂರು ದಿನಗಳ ಕಾಲ ನಡೆಯುವ ಫೆಸ್ಟ್‌ನಲ್ಲಿ ಮೂರನೇ ಹಾಗೂ ಕೊನೆಯ ದಿನ ಭಟ್ಕಳದ ನವಾಯತ್ ಸಂಸ್ಕೃತಿಯ ಕುರಿತು ಇಂಜಿನಿಯರಿಂಗ್ ಕಾಲೇಜಿನ ಸ್ಥಳೀಯ ನವಾಯತ್ ವಿದ್ಯಾರ್ಥಿಗಳಿಂದ ವಿಷೇಶವಾದ ಪ್ರದರ್ಶನ ಏರ್ಪಡಿಸಲು ಚಿಂತಿಸಲಾಗಿದೆ. ನವಾಯತ್ ಸಂಸ್ಕೃತಿಯು ಬೇರೆಯೇ ಆದ ಅಸ್ತಿತ್ವವನ್ನು ಹೊಂದಿದ್ದು ಅರಬ್ ದೇಶದ ಸಂಸ್ಕೃತಿಯೊಂದಿಗೆ ಇಲ್ಲಿನ ಸಂಸ್ಕೃತಿಯನ್ನು ಹೊಂದಿದೆ. ನಾವು ವ್ಯವಹಾರಕ್ಕಾಗಿ ಬಂದವರಾಗಿದ್ದು, ಇಲ್ಲಿ ವ್ಯವಹಾರವನ್ನು ಮಾಡಿ ನಂತರ ಇಲ್ಲಿಯೇ ವಾಸಿಸಿದರೂ ಸಹ ನಮ್ಮ ಸಂಸ್ಕೃತಿಯನ್ನು ಇನ್ನೂ ತನಕ ಮುಂದುವರಿಸಿಕೊಂಡು ಬಂದಿದ್ದೇವೆ. ಪ್ರಪಂಚದಲ್ಲಿಯೇ ನಾವು ಅತ್ಯಂತ ಪ್ರಭಾವಿ ವ್ಯಾಪಾರಿಗಳು ಎಂದೂ ಹೇಳಿದ ಅವರು ನಾವು ನಮ್ಮ ವ್ಯವಹಾರವನ್ನು ಅತ್ಯಂತ ನ್ಯಾಯ ಸಮ್ಮತವಾಗಿ ಕರ್ನಾಟಕ, ಕೇರಳ ಮತ್ತು ವಿದೇಶದಲ್ಲಿ ಹೆಚ್ಚಾಗಿ ಮಾಡುತ್ತಾ ಬಂದಿದ್ದೇವೆ. ಜನತೆಗೆ ನವಾಯತ್ ಸಂಸ್ಕೃತಿಯ ಕುರಿತು ಪರಿಚಯ ಮಾಡಿಕೊಡುವುದು ಇದರ ಉದ್ದೇಶವಾಗಿದೆ ಎಂದೂ ಹೇಳಿದರು. ಇದೇ ಸಂದರ್ಭದಲ್ಲಿ ಅವರು ನೆಬುಲಸ್ ಟೆಕ್ನಿಕಲ್ ಪೆಸ್ಟ್ - 2016 ಪೋಸ್ಟರ್ ಬಿಡುಗಡೆಗೊಳಿಸಿದರು.

  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ, ನಿರ್ದೇಶಕ ಡಾ. ಉದಯ ಪ್ರಸನ್ನ, ಉಪ ಪ್ರಾಂಶುಪಾಲ ಪ್ರೊ. ಎಚ್.ಎಂ. ಫಾಲಚಂದ್ರ, ಮಿಡಿಯಾ ಕೋ-ಆರ್ಡಿನೇಟರ್ ಪ್ರೊ. ಸುಬ್ರಹ್ಮಣ್ಯ ಭಾಗವತ್, ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿ, ಕಾರವಾರ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ವಿಶ್ವನಾಥ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News