ಭಟ್ಕಳ: ಅಕ್ರಮ ಮದ್ಯ ಸಾಗಾಟ :ಇಬ್ಬರಬಂಧನ
ಭಟ್ಕಳ: ಇಲ್ಲಿನ ನಗರ ಮತ್ತು ಗ್ರಾಮೀಣ ಠಾಣೆಯ ಪೊಲೀಸರು ಮಣ್ಕುಳಿ ಹಾಗೂ ಶಿರಾಲಿಯಲ್ಲಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿರಾಲಿಯ ಕೃಷ್ಣಪ್ರಸಾದ ಹೊಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಬುಧವಾರ ಸಂಜೆ ದಾಳಿನಡೆಸಿದ ಗ್ರಾಮೀಣ ಠಾಣೆ ಪಿಮಂಜುನಾಥ ಟಿ.ಹೆಚ್ ಮತ್ತು ಸಿಬ್ಬಂದಿಗಳು ಯಾವದೇ ಅಧಿಕೃತ ಪಾಸ್ ಅಥವಾ ಪರವಾನಿಗೆ ಹೊಂದದೇ ಮದ್ಯವನ್ನು ರಟ್ಟಿನಬಾಕ್ಸನಲ್ಲಿಟ್ಟುಕೊಂಡು ಮಾರಾಟಕ್ಕೆಂದು ಸಾಗಿಸುತ್ತಿದ್ದ ಬೆಳ್ಕೆಯ ಕೃಷ್ಣಹೊನ್ನಪ್ಪ ನಾಯ್ಕ ಎಂಬಾತನ್ನು ಬಂಧಿಸಿ ಆತನಿಂದ 4166.74 ರೂ. ಮೌಲ್ಯದ ಕರ್ನಾಟಕ ರಾಜ್ಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಂತೆ ನಗರ ಠಾಣೆಯ ಪಿ.ಎಸೈ ಹನುಮಂತಪ್ಪ ಕುಡಕುಂಟಿ ಮತ್ತು ಸಿಬ್ಬಂದಿಗಳು ಮಣ್ಕುಳಿಯ ಪುಷ್ಪಾಂಜಲಿ ಟಾಕೀಸಿಗೆ ಹೋಗುವ ಕ್ರಾಸ್‌ನಲ್ಲಿ ಯಾವುದೇ ಅಧಿಕೃತ ಪಾಸ್ ಅಥವಾ ಪರವಾನಿಗೆ ಇಲ್ಲದೇ ಮದ್ಯಸಾಗಿಸುತ್ತಿದ್ದ ಕುಮಾರಮಾದೇವ ನಾಯ್ಕ ಎಂಬಾತನನ್ನು ಬಂಧಿಸಿ 3725 ರೂ.ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.