×
Ad

ಮಂಗಳೂರಿನ ಮಸ್ಜಿದುಲ್ ಇಹ್ಸಾನ್ ನಲ್ಲೂ ಮಯ್ಯತ್ ಸ್ನಾನಕ್ಕೆ ವ್ಯವಸ್ಥೆ

Update: 2016-03-31 19:52 IST

ಮಂಗಳೂರು, ಮಾ. 31: ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಮೃತದೇಹದ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಉಚಿತ ವ್ಯವಸ್ಥೆಯು ನಗರದ ಫಳ್ನೀರ್ ರಸ್ತೆಯ ಯುನಿಟಿ ಆಸ್ಪತ್ರೆ ಹಿಂಭಾಗದಲ್ಲಿರುವ ಹೈಲ್ಯಾಂಡ್ ಎಜುಕೇಶನಲ್ ಕಲ್ಚರಲ್ ಸೆಂಟರ್ ಅಧೀನದ ಮಸ್ಜಿದುಲ್ ಎಹ್ಸಾನ್‌ನಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿದೆ.ಇದರೊಂದಿಗೆ ಮೃತದೇಹದ ಅಂತ್ಯ ಸಂಸ್ಕಾರದ ವಿಧಾನಗಳನ್ನು ನೆರವೇರಿಸುವ ಈ ವ್ಯವಸ್ಥೆಯನ್ನು ಮಂಗಳೂರಿನ ಎರಡೆನಯ ಮಸೀದಿಯಲ್ಲಿ ಕಲ್ಪಿಸಿದಂತಾಗಿದೆ. ಮಂಗಳೂರಿನ ಬಂದರ್‌ನಲ್ಲಿರುವ ಕೇಂದ್ರ ಜುಮಾ ಮಸೀದಿಯಲ್ಲೂ ಈ ವ್ಯವಸ್ಥೆ ಜಾರಿಯಲ್ಲಿದೆ.

ಮೃತ ದೇಹದ ಅಂತ್ಯ ಸಂಸ್ಕಾರ (ಸ್ನಾನ ಮಾಡಿಸುವುದು, ಕಫನ್ ಧಾರಣೆ ಇತ್ಯಾದಿ)ಗಳನ್ನು ಮಾಡಲು ಮಸ್ಜಿದುಲ್ ಎಹ್ಸಾನ್‌ನಿಂದ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಕಫನ್ ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನೂಮಸೀದಿ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಈ ವ್ಯವಸ್ಥೆಯು ಕೇವಲ ಪುರುಷರಿಗಾಗಿ ಮಾತ್ರವಲ್ಲದೆ,ಮಹಿಳೆಯರ ಮೃತದೇಹಕ್ಕೂ ಅನ್ವಯವಾಗಲಿದ್ದು, ಮಹಿಳೆಯ ಮೃತದೇಹಕ್ಕೆ ಮಹಿಳಾ ಸಿಬ್ಬಂದಿಗಳಿಂದಲೇ ವಿಧಿವಿಧಾನಗಳನ್ನು ಉಚಿತವಾಗಿ ನೆರವೇರಿಸಲಾಗುವುದು ಎಂದು ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ಮುಹಮ್ಮದ್ ರಿಝ್ವಾನ್ ತಿಳಿಸಿದ್ದಾರೆ.

ಮಾಹಿತಿಗೆ ಸಂಪರ್ಕಿಸಿ: ರಿಝ್ವಾನ್ : +91 9886017265
                             ಸಲೀಂ     :+91 9611628657
                             ಆದಿಲ್     :+91 9980996939

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News