×
Ad

ಮೂಡುಬಿದಿರೆ : ಮಾರಿಗುಡಿಯಲ್ಲಿ ಬ್ರಹ್ಮಕಲಶೋತ್ಸವ

Update: 2016-03-31 21:05 IST

ಮೂಡುಬಿದಿರೆ: ಇಲ್ಲಿನ ನವೀಕೃತ ಶಿಲಾಮಯ ಶ್ರೀ ಕ್ಷೇತ್ರ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ(ಮಾರಿಗುಡಿ) ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವವು ಗುರುವಾರ ನೆರವೇರಿತು. ಎಡಪದವು ಬ್ರಹ್ಮಶ್ರೀ ತೆಂಕಮನೆ ಟಿ.ಮುರಳೀಧರ ತಂತ್ರಿಗಳ ನೇತೃತ್ವದಲ್ಲಿ ಸಹಸ್ರ ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಬ್ರಹ್ಮಕಲಶೋತ್ಸವ ಪೂಜಾ ವಿಧಿಗಳೊಂದಿಗೆ ಶ್ರೀದೇವಿ ದರ್ಶನ, ಪಲ್ಲಪೂಜೆಗಳು ನಡೆಯಿತು.

ಮೂಡುಬಿದರೆ ಬೋವಿ ಸಮಾಜ, ಚೌಟರ ಮಾಗಣೆ ಹತ್ತು ಸಮಸ್ತ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ಬೋವಿ ಹಾಗೂ ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News