×
Ad

ಭಟ್ಕಳ: ಎ.5ರಿಂದ ‘ನೆಬುಲಸ್ ಫೆಸ್ಟ್’

Update: 2016-03-31 21:50 IST

 ಭಟ್ಕಳ, ಮಾ.31: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನ್ನಾಲಜಿ ಮ್ಯಾನೆಜ್ಮೆಂಟ್ ಮಹಾವಿದ್ಯಾನಿಲಯವು ಎ.5ರಿಂದ ಎ.7 ರವರೆಗೆ ಮೂರು ದಿನಗಳ ಕಾಲ ರಾಷ್ಟ್ರೀಯ ಮಟ್ಟದ ‘ನೆಬುಲಸ್ ಟೆಕ್ನಿಕಲ್ ಫೆಸ್ಟ್-2016’ ಆಯೋಜಿಸುವುದಾಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಶಿಮಜಿ ಮುಹಮ್ಮದ್ ಅನ್ಸಾರ್ ತಿಳಿಸಿದ್ದಾರೆ. ಅವರು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮೂರು ದಿನಗಳ ಕಾಲ ನಡೆಯುವ ಟೆಕ್ನಿಕಲ್ ಫೆಸ್ಟ್‌ನಿಂದ ಇಂಜಿನಿಯರಿಂಗ್ ಮತ್ತು ಮ್ಯಾನೆಜ್‌ಮೆಂಟ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮಾಹಿತಿ ದೊರೆಯುವುದಲ್ಲದೇ, ಉತ್ತಮ ಮಾರ್ಗದರ್ಶನ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಕೂಡಾ ಆಹ್ವಾನಿಸಿ ಅವರೂ ಸಹ ಭಾಗವಹಿಸುವಂತೆ ಮಾಡಲು ಉತ್ಸುಕರಾಗಿದ್ದೇವೆ ಎಂದ ಅವರು, ಮೂರು ದಿನಗಳ ಕಾಲ ನಡೆಯುವ ಫೆಸ್ಟ್‌ನಲ್ಲಿ ಕೊನೆಯ ದಿನ ಭಟ್ಕಳದ ನವಾಯತ್ ಸಂಸ್ಕೃತಿಯ ಕುರಿತು ಇಂಜಿನಿಯರಿಂಗ್ ಕಾಲೇಜಿನ ಸ್ಥಳೀಯ ನವಾಯತ್ ವಿದ್ಯಾರ್ಥಿಗಳಿಂದ ವಿಶೇಷವಾದ ಪ್ರದರ್ಶನ ಏರ್ಪಡಿಸಲು ಚಿಂತಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ‘ನೆಬುಲಸ್ ಟೆಕ್ನಿಕಲ್ ಫೆಸ್ಟ್ - 2016’ರ ಕರಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಮುಷ್ತಾಕ್ ಅಹ್ಮದ್ ಭಾವಿಕಟ್ಟಿ, ನಿರ್ದೇಶಕ ಡಾ. ಉದಯ ಪ್ರಸನ್ನ, ಉಪ ಪ್ರಾಂಶುಪಾಲ ಪ್ರೊ. ಎಚ್.ಎಂ. ಫಾಲಚಂದ್ರ, ಮೀಡಿಯಾ ಕೋ-ಆರ್ಡಿನೇಟರ್ ಪ್ರೊ. ಸುಬ್ರಹ್ಮಣ್ಯ ಭಾಗವತ್, ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿ, ಕಾರವಾರ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ವಿಶ್ವನಾಥ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News