ಅಕ್ರಮ ಮದ್ಯ ಸಾಗಾಟ: ಇಬ್ಬರ ಬಂಧನ
Update: 2016-03-31 21:51 IST
ಭಟ್ಕಳ, ಮಾ.31: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಮಣ್ಕುಳಿ ಹಾಗೂ ಶಿರಾಲಿಯಲ್ಲಿ ನಡೆದಿದೆ.
ಶಿರಾಲಿಯ ಖಾಸಗಿ ಹೊಟೇಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಬುಧವಾರ ಸಂಜೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪಿಎಸ್ಸೈ ಮಂಜುನಾಥ್ ಟಿ. ಎಚ್. ಮತ್ತು ಸಿಬ್ಬಂದಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೆಳ್ಕೆಯ ಕೃಷ್ಣ ಹೊನ್ನಪ್ಪ ನಾಯ್ಕ ಎಂಬಾತನನ್ನು ಬಂಧಿಸಿ ಆತನಿಂದ 4,166.74 ರೂ. ವೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನಗರ ಠಾಣೆಯ ಪಿಎಸೈ ಹನುಮಂತಪ್ಪ ಕುಡಕುಂಟಿ ಮತ್ತು ಸಿಬ್ಬಂದಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕುಮಾರ ಮಾದೇವ ನಾಯ್ಕ ಎಂಬಾತನನ್ನು ಬಂಧಿಸಿ 3,725 ರೂ. ವೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ನಗರ ಮತ್ತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.