ಅಪಹರಣಕಾರನೊಂದಿಗೆ ಗಗನಸಖಿಯ ಸೆಲ್ಫಿ!
Update: 2016-03-31 22:22 IST
ಲಂಡನ್, ಮಾ. 31: ಮೊನ್ನೆ ಈಜಿಪ್ಟ್‌ಏರ್ ವಿಮಾನವನ್ನು ಅಪಹರಿಸಿದ ವ್ಯಕ್ತಿಯೊಂದಿಗೆ ಬ್ರಿಟನ್‌ನ ಪ್ರಯಾಣಿಕನೊಬ್ಬ ಸೆಲ್ಫಿ ತೆಗೆದುಕೊಂಡ ಸುದ್ದಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಈಗ ಸ್ವತಃ ವಿಮಾನದ ಗಗನಸಖಿಯೇ ವಿಮಾನ ಅಪಹರಣಕಾರನೊಂದಿಗೆ ನಿಂತು ಸೆಲ್ಫಿ ತೆಗೆದುಕೊಂಡ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಡುತ್ತಿವೆ.
ಮಂಗಳವಾರ ನಡೆದ ಐದು ಗಂಟೆಗಳ ಅಪಹರಣ ಬಿಕ್ಕಟ್ಟಿನ ವೇಳೆ, ಗಗನಸಖಿ ನೈರಾ ಅತೀಫ್ ಅಪಹರಣಕಾರನೊಂದಿಗೆ ನಗುತ್ತಾ ನಿಂತು ತೆಗೆದುಕೊಂಡ ಸೆಲ್ಫಿಯನ್ನು ಫೇಸ್‌ಬುಕ್‌ನಲ್ಲಿ ಹಾಕಲಾಗಿದೆ.