ದ.ಕ.ದಲ್ಲಿ 33 ಹೊಸ ನ್ಯಾಯಬೆಲೆ ಅಂಗಡಿಗಳ ಸ್ಥಾಪನೆ: ಸಚಿವ ದಿನೇಶ್ ಗುಂಡೂರಾವ್

Update: 2016-03-31 18:04 GMT

ಬೆಂಗಳೂರು, ಮಾ.31: ದ.ಕ.ಜಿಲ್ಲೆಯಲ್ಲಿ ಒಟ್ಟು 33 ಸ್ಥಳಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಆವಶ್ಯಕತೆಯಿರುವುದು ಕಂಡುಬಂದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಶಾಸಕ ಮೊಯ್ದಿನ್ ಬಾವ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಮಂಗಳೂರು ನಗರ-59, ಮಂಗಳೂರು ತಾಲೂಕು-110, ಬಂಟ್ವಾಳ-110, ಪುತ್ತೂರು-71, ಬೆಳ್ತಂಗಡಿ-64, ಸುಳ್ಯ-59 ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 473 ನ್ಯಾಯಬೆಲೆ ಅಂಗಡಿಗಳಿವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹೊಸದಾಗಿ ಕಾವೂರು ಗ್ರಾಮದ ಮರಕಡ, ಪಣಂಬೂರು, ಪದವಿನಂಗಡಿಯ ಯೆಯ್ಯಾಡಿ, ಚಿಲಿಂಬಿ, ಕೋಡಿಕಲ್, ತೊಕ್ಕೊಟ್ಟು, ಕಂಕನಾಡಿ, ಜೆಪ್ಪು, ಕಾಟಿಪಳ್ಳ, ಹಳೆಯಂಗಡಿಯ ಇಂದಿರಾನಗರ, ಸಸಿಹಿತ್ಲು, ಪಡುಪಣಂಬೂರು, ಬಾಳ, ಪೆರ್ಮುದೆ, ಕಂದಾವರ, ಕಿನ್ಯ ಗ್ರಾಮದ ಬೆಳ್ಳರಿಂಗೆ ಸೇರಿದಂತೆ 33 ಗ್ರಾಮಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News