ನಾಳೆ ವಿದ್ಯುತ್ ನಿಲುಗಡೆ
Update: 2016-03-31 23:38 IST
ಮಂಗಳೂರು, ಮಾ.31: ಕುಂದಾಪುರ -ಬೈಂದೂರು 33 ಕೆವಿ ಮಾರ್ಗದ ವಾಹಕ ಬದಲಾವಣಾ ಕಾಮಗಾರಿ ಯನ್ನು ಎ.2ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಶಿರೂರು, ಬೈಂದೂರು, ಕೊಲ್ಲೂರು, ಉಪ್ಪುಂದ, ಕಂಬದಕೋಣೆ, ಗಂಗೊಳ್ಳಿ, ತ್ರಾಸಿ, ಹೆಮ್ಮಾಡಿ, ವಂಡ್ಸೆ, ಕರ್ಕುಂಜೆ, ಚಿತ್ತೂರು, ಜಡ್ಕಲ್, ಮುದೂರು, ಕೆರಾಡಿ, ಬೆಳ್ಳಾಲ, ಕೊಡ್ಲಾಡಿ, ಗುಲ್ವಾಡಿ, ಹೊಸೂರು, ಹಟ್ಟಿಯಂಗಡಿ, ಗೋಳಿ ಹೊಳೆ, ತಲ್ಲೂರು ಗ್ರಾಮಗಳ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.