×
Ad

ಉತ್ತರಾಖಂಡದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಶಿವಸೇನೆ

Update: 2016-03-31 23:49 IST

ಹೊಸದಿಲ್ಲಿ, ಮಾ.31 : ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ಸಮರ್ಥಿಸಿಕೊಂಡ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರಕ್ಕೆ ಬುಧವಾರ ತನ್ನ ಮಿತ್ರ ಪಕ್ಷ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯಿಂದ ದೊಡ್ಡ ಆಘಾತವೇ ಕಾದಿತ್ತು. ‘‘ಉತ್ತರಾಖಂಡದಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೀಡಿನ ವಿಷಯ.ಸರಕಾರ ರಚಿಸಲು ಅಷ್ಟೊಂದು ಆತುರವೇಕೆ? ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಬಗೆಹರಿಸಬೇಕು,’’ ಎಂದು ಉದ್ಧವ್ ಬಿಜೆಪಿ ಸರಕಾರಕ್ಕೆ ಚಾಟಿ ಬೀಸಿದರು.

   ಶಿವಸೇನೆಯ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ‘‘ಉತ್ತರಾಖಂಡದಲ್ಲಿ ಪ್ರಜಾಪ್ರಭುತ್ವದ ಸಾವು’’ ಎಂದು ಆಪಾದಿಸಿದೆಯಲ್ಲದೆ ‘ಏಕ ಪಕ್ಷದ ಆಡಳಿತ ಬೇಕೆಂಬ ಬಯಕೆ ತುರ್ತುಪರಿಸ್ಥಿತಿ ಮತ್ತು ಸರ್ವಾಧಿಕಾರಕ್ಕಿಂತ ಅಪಾಯಕಾರಿ’ ಎಂದಿದೆ. ‘‘ನೈತಿಕತೆಯ ವಿಚಾರದಲ್ಲಿ ಚುನಾಯಿತ ಸರಕಾರದ ಕತ್ತು ಹಿಸುಕಲಾಗಿದೆ, ಎಂದು ಸಂಪಾದಕೀಯದಲ್ಲಿ ಹೇಳಿದ್ದು ನಾವು ಕಾಂಗ್ರೆಸ್ ಸಿದ್ಧಾಂತ ಹಾಗೂ ಭ್ರಷ್ಟ ಸರಕಾರಗಳ ವಿರುದ್ಧವಾಗಿದ್ದರೂ ಪ್ರಜಾಪ್ರಭುತ್ವದ ನಿಯಮದಂತೆ ಚುನಾಯಿತ ಸರಕಾರವನ್ನು ಪ್ರಜಾಪ್ರಭುತ್ವದ ಮಾದರಿಯಲ್ಲೇ ಕೆಳಗಿಳಿಸಬೇಕು,’’ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News