×
Ad

ಕಾಸರಗೋಡು: ಅಕ್ರಮ ಮದ್ಯ ವಶ; ಆರೋಪಿ ಪರಾರಿ

Update: 2016-04-01 14:59 IST

ಕಾಸರಗೋಡು, ಎ.1: ನಿರ್ಜನ ಪ್ರದೇಶದಲ್ಲಿ ಬಚ್ಚಿಟ್ಟಿದ್ದ 192 ಬಾಟ್ಲಿ ವಿದೇಶಿ ಮದ್ಯವನ್ನು  ಕಾಸರಗೋಡು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂದರ್ಭ ಆರೋಪಿ ಪರಾರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ  ನೆಲ್ಲಿಕುಂಜೆ ಗೀತಾ ಜಂಕ್ಷನ್ ಬಳಿಯ ನಿರ್ಜನ ಪ್ರದೇಶದಲ್ಲಿ ಮದ್ಯವನ್ನು ಬಚ್ಚಿಡಲಾಗಿತ್ತು. ಅಕ್ರಮವಾಗಿ  ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ  ಮಾಹಿತಿ ಪೊಲೀಸರಿಗೆ ಲಭಿಸಿತ್ತು .
ಇದರಂತೆ ದಾಳಿ ನಡೆಸಿದ ಪೊಲೀಸರು ಭಾರೀ ಪ್ರಮಾಣದ  ಮದ್ಯ ವಶಪಡಿಸಿಕೊಂಡಿದ್ದು, ಪೊಲೀಸರು  ದಾಳಿ ನಡೆಸುತ್ತಿದ್ದಂತೆ  ಆರೋಪಿ ಪರಾರಿಯಾದನು.
ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News