ಕಿನ್ನಿಗೋಳಿ: ವಿಶ್ವ ಮುಹಿಳಾ ದಿನಾಚರಣೆ
ಕಿನ್ನಿಗೋಳಿ, 1: ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವಜನ ವಿಕಾಸ ಕೇಂದ್ರ, ಮತ್ತು ನವಜ್ಯೋತಿ ಮಹಿಳಾ ಮಂಡಲ (ರಿ) ಪಂಜ ಕೊಯಿಕುಡೆ ಇವರ ಸಂಯುಕ್ತ ಅಶ್ರಯದಲ್ಲಿ ವಿಶ್ವ ಮುಹಿಳಾ ದಿನಾಚರಣೆ ನವಜ್ಯೋತಿ ಮಹಿಳಾ ಮಂಡಲದ ವಠಾರದಲ್ಲಿ ನಡೆಯಿತು.
ಈ ಸಂದರ್ಭ ಮುಖ್ಯ ಅಥಿತಿಯಾಗಿ ಮಾತನಾಡಿದ ಕಿನ್ನಿಗೋಳಿ ನಾರಾಯಣ ಗುರು ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಕುಮಾರಿ ಉಷಾ ಮಹಿಳಾ ದಿನಾಚರಣೆ ಕೇವಲ ಆಚರಣೆ ಮೀಸಲಾಗಿರದೆ, ಉತ್ತಮ ಕೆಲಸ ಕಾರ್ಯಗಳಿಂದ ನಾವೂ ಯಾರಿಗೂ ಕಡಿಮೆ ಇಲ್ಲ ಎಂಬಂತೆ ತೋರಿಸಿ ಕೊಡಬೇಕು, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಮೀಸಲಾತಿ ಇದ್ದು ಅದನ್ನು ಸದುಪಯೋಗ ಪಡೆಯಬೇಕು ಎಂದರು.
ಇದೇ ವೇಳೆ ಶೈಖ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಸ್ಥಳೀಯ ವಿದ್ಯಾರ್ಥಿಗಳಾದ ಚೈತ್ರಾ ಸಾಲ್ಯಾನ್ ಪಂಜ ಮತ್ತು ಸನಿಧಿ ವಿ. ಶೆಟ್ಟಿ ಪಂಜ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ನವ ಜೋತಿ ಮಹಿಳಾ ಮಂಡಳದ ಉಪಾಧ್ಯಕ್ಷೆ ಶ್ರೀಮತಿ ವಿಜಯ ಶೇಟ್ಟಿ ಪಂಜ, ಬ್ರಾಮರಿ ಮಹಿಳಾ ಮಂಡಲ ಮೆನ್ನ ಬೆಟ್ಟು ಇದರ ರೇವರಿ ಪುರುಶೋತ್ತಮ್, ಮತ್ತಿತರರು ಇದ್ದರು. ಶೈಲ ಎನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಕುಶಲಾ ಶೇಖರ್ ಸ್ವಾಗತಿಸಿ, ತಾರಾ ಬಿ. ಶೆಟ್ಟಿ ವಂದಿಸಿದರು.