×
Ad

ಸುರತ್ಕಲ್: ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಗೂಂಡಾಗಿರಿ

Update: 2016-04-01 15:24 IST

ಸುರತ್ಕಲ್, ಎ.1: ಇಲ್ಲಿನ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಗೂಂಡಾಗಿರಿ ಹೆಚ್ಚಿದ್ದು ಟೋಲ್‌ಶುಲ್ಕ ಹೆಚ್ಚಿಸಿ ಮತ್ತೆ ಇಬ್ಬರು ಖಾಸಗಿ ಬಸ್ ನಿರ್ವಾಹಕರಿಗೆ ಟೋಲ್‌ಗೇಟ್ ಸಿಬ್ಬಂದಿ  ಥಳಿಸಿರುವ ಘಟನೆ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಬಳಿ ಇಂದು ನಡೆದಿದೆ.


ಹಲ್ಲೆಗೊಳಗಾದವರನ್ನು  ಬಸ್‌ ನಿರ್ವಾಹಕ ಪ್ರವೀಣ್ ಎಂದು ತಿಳಿದು ಬಂದಿದೆ. ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಬಸ್‌ನವರು ಕಾರ್ಕಳದಿಂದ ಮಂಗಳೂರಿಗೆ ತೆರಳುವ ವೇಳೆ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ 75 ರೂ. ಶುಲ್ಕ ನೀಡಿದ್ದರು. ಬಳಿಕ ಹಿಂದಿರುಗುತ್ತಿದ್ದ ವೇಳೆ ಶುಲ್ಕ ಹೆಚ್ಚಿದ್ದು ಮತ್ತೆ 75 ರೂ. ನೀಡುವಂತೆ ಬಸ್ ನಿಲ್ಲಿಸಿ ಕೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಏಕಾಏಕಿ ಬಸ್‌ನ ನಿರ್ವಾಹಕ ಪ್ರವೀಣ್ ಎಂಬಾತನಿಗೆ ಥಳಿಸಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಇನ್ನೊಂದು ಬಸ್‌ನ ನಿವಾಹಕನಿಗೂ ಥಳಿಸಲಾಗಿದೆ ಎಂದು ಬಸ್ ನಿರ್ವಾಹಕರ ಸಂಘದವರು ಆರೋಪಿಸಿದ್ದಾರೆ.


  ಈ ಸಂಬಂದ ಬಸ್ ನಿರ್ವಾಹಕರು ಬಸ್ ಚಾಲಕ ಮಾಲಕರ ಸಂಘದೊಂದಿಗೆ ಸೇರಿಕೊಂಡು ಏಕಾಏಕಿ ಖಾಸಗಿ ಬಸ್‌ಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪತ್ರಿಭಟನೆ ನಡೆಸಿದ್ದಾರೆ. ದೂರದ ಊರುಗಳಿಗೆ ತೆರಳಬೇಕಾಗಿದ್ದ ಹಲವು ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಅಲ್ಲದೆ, ಕೆಲ ಪ್ರಯಾಣಿಕರು ಕಾರು ಲಾರಿ ರಿಕ್ಷಾಗಳನ್ನು ಅರಸಿ ತೆರಳಿದರು. ಇನ್ನು ಕೆಲವರು ಮಕ್ಕಳು ಮರಿಗಳನ್ನು ಹಿಡಿದುಕೊಂಡು ಪರಡಾಡುತ್ತಿರುವುದು ಕಂಡು ಬರುತ್ತಿತ್ತು,.
 

ಟೋಲ್‌ಗೇಟ್‌ನ ಮಾಲಕ ಉದಯ ಸಿಂಗ್ ಟೋಲ್ ಗೇಟ್ ಶುಲ್ಕದಲ್ಲಿ ರಿಯಾಯಿತಿ ನಿಡುವ ಬಗ್ಗೆ ಮಾತುಕತೆಗಳನ್ನು ನಡೆಸಿದ್ದು ಈಗ ಗೂಂಡಾಗಿರಿ ನಡೆಸುತ್ತಿದ್ದಾರೆ,  ತಕ್ಷಣ ಟೋಲ್‌ಗೇಟ್ ಉದಯ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ಭೇಟಿನೀಡಿ ತಕ್ಷಣ ಪರಿಹಾರ ನೀಡಬೇಕು ಇಲ್ಲವಾದಲ್ಲಿ ರಾಜ್ಯಾಂಧ್ಯಂತ ಎಲ್ಲಾ ಖಾಸಗಿ ಬಸ್‌ಗಳನ್ನು ಬಂದ್ ಮಾಡಿ ಉಗ್ರ ಹೋರಾಟ ಸಂಘಟಿಸಲಾಗುವುದು ಎಂದು ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಕಿನ್ನಿಗೋಳಿ ತಿಳಿಸಿದ್ದರೆ.

ಗೂಂಡಾಗಿರಿ: ಇಲ್ಲಿ ಬೆಳಗ್ಗಿನ ವೇಳೆ ಸಲೀಸಾಗಿ ಟೋಲ್ ಸಂಗ್ರಹ ನಡೆಸುತ್ತಿರುವ ಟೋಲ್ ಸಿಬ್ಬಂದಿ, ಕತ್ತಲಾಗುತ್ತಿರುವಂತೆ ತನ್ನ ಗೂಂಡಾಗಿರಿ ಆರಂಭಿಸುತ್ತಿರುತ್ತರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕೆ.ಎ.19 ರಿಜಿಸ್ಟರ್‌ನ ವಾಹನಗಳಿಗೆ ಶುಲ್ಕದಲ್ಲಿ ರಿಯಾಯಿತಿ ಕಲ್ಪಸಲಾಗಿತ್ತಾದರೂ ರಾತ್ರಿ ಬಳಿಕ ಎಲ್ಲಾ ವಾಹನಗಳಿಂದಲೂ ಶುಲ್ಕ ಪಡೆಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News