×
Ad

ಮಧ್ಯಪ್ರದೇಶದಲ್ಲಿ ಪಾಸ್‌ಪೋರ್ಟ್ ಸಿಗಬೇಕಾದರೆ ಮನೆಯಲ್ಲಿ ಶೌಚಾಲಯ ಇರಬೇಕು

Update: 2016-04-01 17:32 IST

ಮಧ್ಯಪ್ರದೇಶ, ಎಪ್ರಿಲ್.1: ಮನೆಯಲ್ಲಿ ಶೌಚಾಲಯ ಇದ್ದರೆ ಮಾತ್ರ ಮಧ್ಯಪ್ರದೇಶದ ನಿಮಿಂಚ್‌ನಲ್ಲಿ ಇನ್ನುಮುಂದೆ ಪಾಸ್‌ಪೋರ್ಟ್ ಲಭಿಸಲಿದೆ . ಪಾಸ್‌ಪೋರ್ಟ್, ಆಯುಧ ಲೈಸೆನ್ಸ್, ಕಂಡಕ್ಟ್ ಸರ್ಟಿಫಿಕೆಟ್ ಮುಂತಾದುಗಳನ್ನು ಬಯಸುವವರು ಇನ್ನು ಮುಂದೆ ತಮ್ಮ ಮನೆಯಲ್ಲಿ ಶೌಚಾಲಯ ಇರುವುದನ್ನು ಖಾತ್ರಿ ಪಡಿಸಬೇಕಾಗಿದೆ ಎಂದು ನಿಮಿಂಚ್ ಪೊಲೀಸ್ ತೀರ್ಮಾನಿಸಿದೆ.

 ಪ್ರಧಾನಿ ನರೇಂದ್ರ ಮೋದಿಯ ಕನಸಿನ ಯೋಜನೆಯಾದ ಸ್ವಚ್ಛಭಾರತ್ ಯೋಜನೆಯನ್ನು ಬೆಂಬಲಿಸಲಿಕ್ಕಾಗಿ ಈ ನಿರ್ಧಾರ ತಳೆಯಲಾಗಿದೆ ಎಂದು ನಿಮಿಂಚ್ ಪೊಲೀಸ್ ಸುಪರಿಟೆಂಡೆಂಟ್ ಮನೋಜ್ ಸಿಂಗ್ ಹೇಳಿದ್ದಾರೆ. ಸ್ವಚ್ಛ ಭಾರತ್ ಯೋಜನೆಯ ಅಂಗವಾಗಿ ಇದೇ ಮೊದಲಬಾರಿಗೆ ಇಂತಹ ಒಂದು ನಿರ್ಧಾರ ಮಧ್ಯಪ್ರದೇಶದಲ್ಲಿ ಇದೇ ಮೊದಲಬಾರಿಗೆ ತಳೆಯಲಾಗಿದೆ. ತೀರ್ಮಾನವನ್ನು ಜಾರಿಗೊಳಿಸುವುದಕ್ಕಾಗಿ ಪಾಸ್‌ಪೋರ್ಟ್‌ಗೆ ಅರ್ಜಿಹಾಕುವವರು ಮನೆಯಲ್ಲಿ ಟಾಯ್ಲೆಟ್ ಇದೆ ಎಂಬ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News