ಉಪ್ಪಿನಂಗಡಿ: ತೆಕ್ಕಾರಿನ ಯುವಕ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ
Update: 2016-04-01 18:36 IST
ಉಪ್ಪಿನಂಗಡಿ : ಸೌದಿ ಅರೇಬಿಯಾದ ದಮಾಮ್ ಎಂಬಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿ ನಿವಾಸಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಾ.31ರಂದು ನಡೆದಿದೆ. ಉಪ್ಪಿನಂಗಡಿ ಸಮೀಪದ ತೆಕ್ಕಾರು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮಹಮ್ಮದ್ ಆಸಿಪ್ ಹೃದಯಾಘತದಿಂದ ನಿಧನ ಹೊಂದಿದವರು.
ಕಳೆದ 8 ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದ ಆಸಿಫ್ ಅವರು ದಮಾಮ್ ನಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ತಂದೆ, ತಾಯಿ ಬೀಫಾತಿಮ, ಐವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಮೃತದೇಹವನ್ನು ಅಲ್ಲೇ ದಫನ ಮಾಡಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತ ಆಸಿಫ್ ಅವರ ಸಹೋದರಿಯ ಮದುವೆ ಕೆಲವೇ ದಿನಗಳಲ್ಲಿ ನಡೆಯಲಿದ್ದು ಅದಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.