ರಾಘವೇಶ್ವರ ಶ್ರೀ ಪರತೀರ್ಪಿಗೆ ಭವತಾರಿಣಿ ಸೀಮಾ ಪರಿಷತ್‌ನಿಂದ ವಿಜಯೋತ್ಸವ
ಭಟ್ಕಳ :ಅತ್ಯಾಚಾರ ಪ್ರಕರಣದಲ್ಲಿರಾಮಚಂದ್ರಾಪುರ ಮಠದರಾಘವೇಶ್ವರ ಭಾರತೀ ಶ್ರೀಗಳನ್ನು ನಿರ್ದೋಷಿ ಎಂದು ನ್ಯಾಯಾಲಯತೀರ್ಪ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನಕಿತ್ರೆ ಶ್ರೀ ಕ್ಷೇತ್ರದೇವಿಮನೆಯ ಶ್ರೀ ದುರ್ಗಾಪರಮೇಶ್ವರಿದೇವಸ್ಥಾನದಲ್ಲಿ ಭವತಾರಿಣಿ ಹವ್ಯಕ ಸೀಮಾ ಪರಿಷತ್ ಮತ್ತು ಭಕ್ತರಿಂದ ವಿಶೇಷ ಪೂಜೆನೀಡಿ ವಿಜಯೋತ್ಸವಆಚರಿಸಲಾಯಿತು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಭವತಾರಿಣಿ ಸೀಮಾ ಪರಿಷತ್‌ನಅಧ್ಯಕ್ಷ ನಾರಾಯಣ ಹೆಬ್ಬಾರ ಬೆಣಂದೂರು ನ್ಯಾಯಾಲಯ ಗುರುಗಳನ್ನು ನಿರ್ದೋಷಿ ಎಂದುತೀರ್ಪು ನೀಡಿರುವುದು ಸತ್ಯಕ್ಕೆ ಸಂದಜಯವಾಗಿದೆ.ಮಠದ ಭಕ್ತರು ಮತ್ತು ಶ್ರೀಗಳ ನೈತಿಕ ಸ್ಥೈರ್ಯ ಕುಸಿಯಲು ಶ್ರೀಗಳ ಮೇಲೆ ಅತ್ಯಾಚಾರ ಸೇರಿದಂತೆನಾನಾ ರೀತಿಯಆರೋಪ ಮಾಡಲಾಗಿತ್ತು.ಎಲ್ಲಾಆರೋಪವೂ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ನ್ಯಾಯಾಲಯದತೀರ್ಪಿನಿಂದ ಭಕ್ತವೃಂದಕ್ಕೆ ಸಂತಸತಂದಿದೆಎಂದರು.ಉಪಸ್ಥಿತರಿದ್ದ ನ್ಯಾಯವಾದಿ ಹಾಗೂ ನೋಟರಿಆರ್‌ಆರ್ ಶ್ರೇಷ್ಠಿ ಮಾತನಾಡಿ ಶ್ರೀಗಳು ನಿರ್ದೋಷಿಯಾಗಿರುವುದು ಸಂತಸತಂದಿದ್ದು, ಸತ್ಯಕ್ಕೆಜಯವಾಗಿದೆಎಂದು ಹೇಳಿದರು.ಎಪಿಎಂಸಿ ಉಪಾಧ್ಯಕ್ಷಗಣೇಶ ಹೆಬ್ಬಾರ ಮಾತನಾಡಿ ಭಕ್ತರಿಗೆ ಶ್ರೀಗಳ ಮೇಲಿನ ಆರೋಪದಲ್ಲಿಯಾವುದೇ ಹುರುಳಿಲ್ಲ ಎಂದು ಮೊದಲೇಗೊತ್ತಿತ್ತು.ನ್ಯಾಯಾಲಯದತೀರ್ಪಿನಿಂದ ಸುಳ್ಳಿಗೆ ಸೋಲಾಗಿ, ಸತ್ಯಕ್ಕೆ ಜಯವಾಗಿದೆಎಂದು ಹೇಳಿದರು.ಸರ್ವೆ ನಿವೃತ್ತಅಧಿಕಾರಿ ಮಂಜುನಾಥ ಹೆಬ್ಬಾರ ಮಾತನಾಡಿದರು. ಈ ಸಂದರ್ಭದಲ್ಲಿದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ, ಭವತಾರಿಣಿ ಪರಿಷತ್ ಕಾರ್ಯದರ್ಶಿ ಬಾಬು ಹೆಬ್ಬಾರ, ಕೆನರಾ ಬ್ಯಾಂಕಿನ ನಿವೃತ್ತಅಧಿಕಾರಿ ನಾಗಪ್ಪಯ್ಯ ಹೆಬ್ಬಾರ, ಕೋಣಾರಗ್ರಾ.ಪಂ. ಅಧ್ಯಕ್ಷರಾಧಕೃಷ್ಣಉಪಾಧ್ಯಾಯ,ವೆಂಕಟ್ರಮಣ ಹೆಬ್ಬಾರ, ಕೃಷ್ಣ ಎಸ್ ಹೆಬ್ಬಾರ, ಗಣಪಯ್ಯ ಹೆಗಡೆ, ಶಂಕರ ಭಟ್ಟ, ಉಮೇಶ ಭಟ್ಟ, ಶಿವಾನಂದ ಭಟ್ಟ ಮುಂತಾದವರಿದ್ದರು.