×
Ad

ಎಸ್ಸೆಸೆಲ್ಸಿ ವಿಜ್ಞಾನ ಪರೀಕ್ಷೆ : ಬಂಟ್ವಾಳ ತಾಲೂಕಿನಲ್ಲಿ 74 ವಿದ್ಯಾರ್ಥಿಗಳು ಗೈರು

Update: 2016-04-01 19:26 IST
file photo

 ಬಂಟ್ವಾಳ: ಶುಕ್ರವಾರ ನಡೆದಎಸ್ಸೆಸೆಲ್ಸಿ ವಿಜ್ಞಾನ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 74 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ತಾಲೂಕಿನಲ್ಲಿಒಟ್ಟು 6,025 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ 5,951 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ.

ಸಜಿಪಮೂಡ ಪ.ಪೂ ಕಾಲೇಜಿನ ಪರೀಕ್ಷಾಕೇಂದ್ರದಲ್ಲಿ 12, ವಾಮದಪದವು ಪರೀಕ್ಷಾಕೇಂದ್ರದಲ್ಲಿ 8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ತಾಲೂಕಿನಲ್ಲಿಒಟ್ಟು 17 ಪರೀಕ್ಷಾ ಕೇಂದ್ರಗಳಿದ್ದು, ಅಕ್ರಮಗಳು ನಡೆಯದಂತೆ ವಿವಿಧ ಇಲಾಖಾ ಅಧಿಕಾರಿಗಳ ತಂಡ ಗಸ್ತು ಕಾರ್ಯ ನಡೆಸಿದೆ.

ಹಾಗೆಯೇಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ದಿನ ಗುರುವಾರ ನಡೆದಕನ್ನಡ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 75 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ತಾಲೂಕಿನಲ್ಲಿಒಟ್ಟು 6,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ 5,925 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ.

ಸಜಿಪಮೂಡ ಪ.ಪೂ ಕಾಲೇಜಿನ ಪರೀಕ್ಷಾಕೇಂದ್ರದಲ್ಲಿ 10, ವಾಮದಪದವು ಪರೀಕ್ಷಾಕೇಂದ್ರದಲ್ಲಿ 8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಎಂದುಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನಕಾರಿಂಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News