×
Ad

ಸುಳ್ಯ: ಬೈಕ್ ಢಿಕ್ಕಿ - ಪಾದಚಾರಿ ಮೃತ್ಯು

Update: 2016-04-01 19:32 IST

  ಸುಳ್ಯ: ಪೆರುವಾಜೆ ದೇವಸ್ಥಾನದ ಬಳಿ ಪಾದಚಾರಿಯೊಬ್ಬರಿಗೆ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ಪಾದಚಾರಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತ ಪಟ್ಟ ಘಟನೆ ಸಂಭವಿಸಿದೆ. ಪೆರುವಾಜೆಯ ಕೊಟ್ಟೆಕಾಯಿ ರವಿನಾರಾಯಣ ಭಟ್‌ರವರು ಬೆಳ್ಳಾರೆಗೆ ಬಂದು ವಾಪಸ್ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪೆರುವಾಜೆ ಪೇಟೆಯಲ್ಲಿ ವಿದ್ಯಾರ್ಥಿ ಅಶೋಕ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಹೊಡೆಯಿತು. ಪರಿಣಾಮ ರವಿ ನಾರಾಯಣ ಭಟ್ ರವರ ತಲೆಗೆ ಗಂಭೀರ ಗಾಯಗಳಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಸ್ವಲ್ಪ ಹೊತ್ತಿನಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ವಿದ್ಯಾರ್ಥಿ ಆಶೋಕ್ ಗೂ ಅಲ್ಪ ಸ್ವಲ್ಪ ಗಾಯವಾಗಿದೆ.

----------------- 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News