×
Ad

ಮುಸ್ಲಿಂ ಯಂಗ್‌ಮೆನ್ಸ್ ಅಸೋಸಿಯೇಶನ್ ಕಾರ್ನಾಡು, ಮುಲ್ಕಿ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ

Update: 2016-04-01 19:51 IST

ಮಂಗಳೂರು, ಏ.1:ಧಾರ್ಮಿಕ ನಿಯಮ ಪಾಲನೆಯ ಲೋಪ ಹಾಗೂ ತಪ್ಪು ತಿಳುವಳಿಕೆಗಳು ಯುವ ಜನಾಂಗವನ್ನು ದಾರಿತಪ್ಪಿಸುತ್ತಿದ್ದು, ಹಿರಿಯ ಧರ್ಮ ಗುರುಗಳು ಯುವ ಸಮಾಜವನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಅಗತ್ಯವಿದೆ ಮತ್ತು ಯುವಕರು ಸಾಮಾಜಿಕ, ಧಾರ್ಮಿಕ ಹಾಗೂ ಬಡವರಿಗೆ, ದೀನ ದಲಿತರಿಗೆ, ಸಹಾಯ ಹಸ್ತವನ್ನು ಹಾಗೂ ಅವರ ನೆರವಿಗೆ ಧನ ಸಹಾಯವಾಗುವಂತದ್ದು ಶ್ಲಾಘನೀಯ ಎಂದು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್ ಮುಲ್ಕಿ ಹೇಳಿದರು.

 ಅವರು ಇತ್ತೀಚೆಗೆ ಮುಸ್ಲಿಂ ಯಂಗ್‌ಮೆನ್ಸ್ ಅಸೋಸಿಯೇಶನ್ ಕಾರ್ನಾಡು, ಮುಲ್ಕಿ ಇದರ 12ನೇ ವಾರ್ಷಿಕೋತ್ಸವ, ಬಡಯುವತಿಯರಿಗೆ ಧನ ಸಹಾಯ ಹಾಗೂ ಸ್ವಲಾತ್ ಮಜ್ಲಿಸ್‌ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಮುಲ್ಕಿ ಶಾಫೀ ಜುಮ್ಮಾ ಮಸೀದಿ, ಖತೀಬ್ ಬಹು. ಅಲ್‌ಹಾಜ್ ಇಬ್ರಾಹೀಂ ದಾರಿಮಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಆಶೀರ್ವಚಿಸಿದರು. ಸ್ವಲಾತ್ ನೇತೃತ್ವವನ್ನು ವಹಿಸಿದ್ದ ಬಹು ಅಸ್ಸಯ್ಯದ್ ಉೀರ್ ತಂಙಳ್ ಕಿನ್ಯಾ, ಅಧ್ಯಕ್ಷರು, ಶಂಸುಲ್ ಉಲಮಾ ಕಾಲೇಜು, ಮಂಗಳನಗರ, ದೇರಳಕಟ್ಟೆ ಇವರು ಸ್ವಲಾತ್ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

          ಮುಖ್ಯ ಅತಿಥಿಗಳಾಗಿ ಬಹು ಬದ್ರುದ್ದೀನ್ ದಾರಿು, ಖತೀಬರು, ಮಸ್ಜಿದುನ್ನೂರು, ಕಾರ್ನಾಡು, ಜನಾಬ್‌ ಪುತ್ತುಬಾವ, ಕೌನ್ಸಿಲರ್ ನಗರಸಭೆ, ಜನಾಬ್‌ ಕೆ.ಎಚ್. ಮುನೀರ್ ಕಾರ್ನಾಡು, ಅಧ್ಯಕ್ಷರು ಮಾಯತುಲ್ ಇಸ್ಲಾಂ ಸಮಿತಿ ಕಾರ್ನಾಡು, ಜನಾಬ್‌ ಎಂ.ಎ. ಅಮಾನುಲ್ಲಾ, ಅಧ್ಯಕ್ಷರು ನುಸ್ರತುಲ್ ಮಸಾಕೀನ್ ಮುಲ್ಕಿ ಭಾಗವಹಿಸಿದರು.

          ಕಾರ್ಯಕ್ರಮವನ್ನು ಹುಸೈನ್ ಕಾರ್ನಾಡು ಸ್ವಾಗತಿಸಿ, ರಿಝ್ವಾನ್ ಕಾರ್ನಡ್ ಮತ್ತು ಸಲಹೆಗಾರರಾದ ಹಮೀದ್ ಕಿಲ್ಪಾಡಿ ಮತ್ತು ಅಶ್ರಫ್ ಚರಂತಿಪೇಟೆ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News