ಮೂಡುಬಿದಿರೆ: ಎ.3 - ತೆಂಕಮಿಜಾರಿನಲ್ಲಿ ರುದ್ರಭೂಮಿ "ಮೋಕ್ಷಧಾಮ" ಲೋಕಾರ್ಪಣೆ
ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಬಡಗಮಿಜಾರು ಗ್ರಾಮದ ಅಶ್ವತ್ಥಪುರದಲ್ಲಿ 16 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಸಾರ್ವಜನಿಕ ರುದ್ರಭೂಮಿ "ಮೋಕ್ಷಧಾಮ"ವು ಭಾನುವಾರ (ಎ.3) ಸಂಜೆ ಲೋಕಾರ್ಪಣೆಗೊಳ್ಳಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ತಿಳಿಸಿದ್ದಾರೆ.
ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿ0ುಲ್ಲಿ ಮಾಹಿತಿ ನೀಡಿದರು. ತೆಂಕಮಿಜಾರಿನ ಗ್ರಾಮಸ್ಥರು ರುದ್ರಭೂಮಿಗಾಗಿ ಕಳೆದ ನಾಲ್ಕುವರೆ ದಶಕಗಳಿಂದ ಒತ್ತಾಯಿಸುತ್ತಾ ಬಂದಿದ್ದು ಇದೀಗ ಅವರ ಬೇಡಿಕೆ ಈಡೇರಿದೆ. ಅಶ್ವತ್ಥಪುರ ಗ್ರಾಮದ ಸ.ನಂ 233/2ರಲ್ಲಿ 0.70 ಎಕ್ರೆ ಜಾಗವನ್ನು 1962ರಲ್ಲಿ ರುದ್ರಭೂಮಿಗೆ ಕಾದಿರಿಸಲಾಯಿತು. ನಂತರ ಸರಕಾರ, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾ0ುತ್‌ನಿಂದ ಬಿಡುಗಡೆ0ಾದ ವಿವಿಧ ಅನುದಾನಗಳಿಂದ ಸುಮಾರು 16ಲಕ್ಷ ವೆಚ್ಚದಲ್ಲಿ ಮೋಕ್ಷಧಾಮ ಸಾರ್ವಜನಿಕ ರುದ್ರಭೂಮಿ ರಚನೆಗೊಂಡಿದೆ. ಇದರ ಜತೆಗೆ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಕಡದಲ್ಲಿ "ಮುಕ್ತಿಧಾಮ" ಮತ್ತು ಕರಿಕುಮೇರಿನಲ್ಲಿ "ಶಾಂತಿಧಾಮ" ಸಾರ್ವಜನಿಕ ರುದ್ರಭೂಮಿ ಕಾಮಗಾರಿ ಪ್ರಗತಿ0ುಲ್ಲಿದ್ದು ಮಳೆಗಾಲದ ಬಳಿಕ ಇವೆರಡು ಕೂಡಾ ಲೋಕಾರ್ಪಣೆಗೊಳ್ಳಲಿದೆ.
2014-15 ರ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರದ ಮೊತ್ತವನ್ನು ಸಂಪೂರ್ಣವಾಗಿ ರುಧ್ರಭೂಮಿಗೆ ವಿನಿಯೋಗಿಸಲಾಗಿದೆ. ವ್ಯಕ್ತಿಯಶವಸಂಸ್ಕಾರಕ್ಕೆ ತೊಂದೆರೆಯಾಗದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಪಂಚಾಯತ್ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ರುದ್ರಭೂಮಿ ಸಮಿತಿ ಗೌರವ ಅಧ್ಯಕ್ಷ ಬಿ.ಎಲ್ ದಿನೇಶ್ ಕುಮಾರ್ ಹೇಳಿದರು.