ಮಂಗಳೂರು : ಡಾ. ಹಸನ್ ಸರ್ಫರಾಝ್‌ಗೆ ಪಿಎಚ್‌ಡಿ
ಮಂಗಳೂರು, ಎ. 1: ದೇರಳಕಟ್ಟೆ ಯೇನೆಪೋಯ ವಿಶ್ವವಿದ್ಯಾಲಯ ಅಧೀನದ ಯೆನೆಪೋಯ ದಂತ ವೈದ್ಯಕೀಯ ಕೃತಕ ದಂತ ವಿಭಾಗದ ಪ್ರಾಧ್ಯಾಪಕ ಡಾ.ಹಸನ್ ಸರ್ಫರಾಝ್ (ಎಂಡಿಎಸ್)ಅವರು ಇತ್ತೀಚೆಗೆ ‘ಮಿನಿಮೈಝಿಂಗ್ ಆ್ಯಂಡ್ ಡಿಸಿಪೇಶನ್ ಆಫ್ ಸ್ಟ್ರೆಸ್ ಅಟ್ ದ ಇಂಪ್ಲಾಂಟ್ ಅಬ್ಯೂಟ್‌ಮೆಂಟ್ ಇಂಟರ್‌ಫೇಸ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಯೆನೆಪೋಯ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಈ ಸಂಶೋಧನಾ ಪ್ರಬಂಧವು ಓರ್ವ ವ್ಯಕ್ತಿ ಕಳೆದುಕೊಂಡ ಹಲ್ಲುಗಳ ಬದಲಿ ವ್ಯವಸ್ಥೆಯ ಅಭಿವೃದ್ಧಿದಾಯಕ ವಿಧಾನದ ಬೆಳವಣಿಗೆಯಾಗಿದೆ. ಡಾ.ಹಸನ್ ಸರ್ಫರಾಝ್ ಈ ಪ್ರಬಂಧ ಮಂಡನೆಯನ್ನು ಯೇನೆಪೋಯ ದಂತ ವೈದ್ಯಕೀಯ ವಿದ್ಯಾಲಯದ ಕೃತಕ ದಂತ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಕಮಲಕಾಂತ್ ಶೆಣೈ, ಯೇನೆಪೋಯ ದಂತ ವೈದ್ಯಕೀಯ ವಿದ್ಯಾಲಯದ ವಕ್ರದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಅಖತಿರ್ ಹುಸೇನ್ ಮತ್ತು ಬೆಂಗಳೂರಿನ ಬ್ರಾನ್ಮಾರ್ಕ್ ಓಸಿಯೋ ಇಂಟೆಗ್ರೇಷನ್ ಸಂಸ್ಥೆಯ ಡಾ. ರಮೇಶ್ ಚೌಧುರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದಾರೆ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿರುವ ಬ್ಯಾರಿ ಸಮುದಾಯದ ಪ್ರಪ್ರಥಮ ಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.