ಸ್ಫೋಟವೂ ಕಾರಣವಿರಬಹುದು: ನಿರ್ಮಾಣ ಸಂಸ್ಥೆ
Update: 2016-04-01 23:43 IST
ಕೋಲ್ಕತಾ, ಎ.1: ಕೋಲ್ಕತಾದ ಜನನಿಬಿಡ ವಾಣಿಜ್ಯ ಪ್ರದೇಶವೊಂದರಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಕುಸಿದು 24 ಮಂದಿ ಸಾವಿಗೀಡಾದ ಒಂದು ದಿನದ ನಂತರ, ಬಾಂಬ್ ಸ್ಫೋಟ ಸಹಿತ ‘ವಿವಿಧ ಸಾಧ್ಯತೆಗಳ’ ಕುರಿತು ತನಿಖೆ ನಡೆಸಬೇಕೆಂದು ನಿರ್ಮಾಣ ಕಂಪೆನಿ ಇಂದು ಹೇಳಿದೆ.
ಗುರುವಾರ ಕುಸಿದು ಬಿದ್ದ ಮೇಲ್ಸೇತುವೆಯ ನಿರ್ಮಾಣ ಸಂಸ್ಥೆ ಐವಿಆರ್‌ಸಿಎಲ್ ಗುಂಪಿನ ಅಧಿಕಾರಿಗಳ ಬಂಧನಕ್ಕಾಗಿ ಕೋಲ್ಕತಾ ಪೊಲೀಸರು ಹೈದರಾಬಾದ್‌ನಲ್ಲಿದ್ದಾರೆ.
ಗಾಜು ಒಡೆದು ಚದುರಿ ಬಿದ್ದಿತ್ತು. ಅದು ಸ್ಫೋಟವಾಗಿರುವ ಸಾಧ್ಯತೆಯಿದೆಯೆಂದು ಐವಿಆರ್‌ಸಿಎಲ್‌ನ ಕಾನೂನು ಸಲಹೆಗಾರ್ತಿ ಶೀಲಾ ಪೆದ್ದಿಂತಿ ಹೇಳಿದ್ದಾರೆ. ಮೇಲ್ಸೇತುವೆ ಕುಸಿತ ‘ದೇವರ ಕೈವಾಡ’ವೆಂದು ಹೇಳಿಕೆ ನೀಡಿ ನಿರ್ಮಾಣ ಸಂಸ್ಥೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕಂಪೆನಿಯ ಐವರು ಅಧಿಕಾರಿಗಳನ್ನು ಕೋಲ್ಕತಾದಿಂದ ವಶಕ್ಕೆ ಪಡೆಯಲಾಗಿದೆಯೆಂದು ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.