ಪುತ್ತೂರು: 6 ಗ್ರಾಪಂ ಸ್ಥಾನಗಳಿಗೆ ಉಪಚುನಾವಣೆ
Update: 2016-04-01 23:49 IST
ಪುತ್ತೂರು, ಎ.1: ಪುತ್ತೂರು ತಾಲೂಕಿನ 6 ಗ್ರಾಪಂಗಳಲ್ಲಿ ತೆರವಾಗಿರುವ 6 ಸ್ಥಾನಗಳಿಗೆ ಎ.17ರಂದು ಉಪಚುನಾವಣೆ ನಡೆಯಲಿದೆ. ನೆಟ್ಟಣಿಗೆಮುಡ್ನೂರು, ಬಡಗನ್ನೂರು, ಅರಿಯಡ್ಕ, ಕೊಳ್ತಿಗೆ, ಕಡಬ ಮತ್ತು ನೂಜಿಬಾಳ್ತಿಲ ಗ್ರಾಪಂಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಎ.20ರಂದು ಮತ ಎಣಿಕೆ ನಡೆಯಲಿದೆ.