×
Ad

ಎ. 14 ರಿಂದ ಕಲ್ಲಡ್ಕದಲ್ಲಿ ಕೆಪಿಎಲ್ ಕ್ರಿಕೆಟ್

Update: 2016-04-02 13:10 IST

ವಿಟ್ಲ, ಎ. 2: ಝಮಾನ್ ಬಾಯ್ಸ್ ಕಲ್ಲಡ್ಕ ಇದರ ಆಶ್ರಯದಲ್ಲಿ ಕೆಪಿಎಲ್-2016 ಆಹ್ವಾನಿತ 8 ತಂಡಗಳ ನಿಗದಿತ ಓವರ್‌ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ 14 ರಿಂದ 17 ರವರೆಗೆ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

 ನೆಟ್ಲ ಸೂಪರ್ ಕಿಂಗ್ಸ್, ಮುರಬೈಲು ಟೈಗರ್ಸ್‌, ಅಮ್ಟೂರು ವಾರಿಯರ್ಸ್‌, ಯುಎಇ ಬುಲ್ಸ್, ಮದಕ ಚಾಲೆಂಜರ್ಸ್‌, ಮೋನ್‌ಝಾ ಇಲೆವನ್, ಕಲ್ಲಡ್ಕ ನೈಟ್‌ ರೈಡರ್ಸ್‌, ಸನ್‌ರೈಸ್ ಕೆ.ಸಿ.ರೋಡ್ ತಂಡಗಳು ಭಾಗವಹಿಸಲಿವೆ.

ವಿಜೇತ ತಂಡಗಳಿಗೆ ಪ್ರಥಮ ರೂ. 25 ಸಾವಿರ, ದ್ವಿತೀಯ 10 ಸಾವಿರ ರೂ. ನಗದು ಹಾಗೂ ಕೆಪಿಎಲ್ ಟ್ರೋಫಿ ಮತ್ತು ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9901211811 ಅಥವಾ 9611055020ನ್ನು ಸಂಪರ್ಕಿಸುವಂತೆ ಝಮಾನ್ ಬಾಯ್ಸ್ ಅಧ್ಯಕ್ಷ ಜಾಫರ್ ಶರೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News