×
Ad

‘ನನ್ನ ಸಮಯ ಇನ್ನೂ ಬಂದಿಲ್ಲ’

Update: 2016-04-02 13:32 IST

ಕೋಲ್ಕತಾ, ಎ.2: ‘‘ನನ್ನ ಸಮಯ ಬಂದಿಲ್ಲ.ಹಾಗಾಗಿ ತಾನು ಇನ್ನೂ ಜೀವಂತವಾಗಿದ್ದೇನೆ..’’ಇದು ಕೋಲ್ಕತಾದ ಮೇಲ್ಸೇತುವೆ ಕುಸಿತದಲ್ಲಿ ಸಿಲುಕಿ ಪವಾಡ ಸದೃಶವಾಗಿ ಪಾರಾಗಿ ಬಂದ ಉಬೇರ್ ಕ್ಯಾಬ್ ಕಂಪನಿಯ ಚಾಲಕ ಅನಿಲ್ ಸೋನ್ಕರ್ ಮನದಾಳದ ಮಾತು.

ಇತರ ಕಾರು ಚಾಲಕರಂತೆಯೇ ಗುರುವಾರ ಮಧ್ಯಾಹ್ನ 12.15ಕ್ಕೆ ಮನೆಯಿಂದ ಕೆಲಸಕ್ಕೆ ತೆರಳಿದ್ದ 25ರ ಹರೆಯದ ಸೋನ್ಕರ್ ವಿವೇಕಾನಂದ ರೋಡ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾರೀ ಶಬ್ದ ಕೇಳಿತು. ಅದಾಗಲೇ ಧೂಳು-ಮಣ್ಣು ಕಾರಿನ ಛಾವಣೆಯ ಮೇಲೆ ಬಿದ್ದ ಪರಿಣಾಮ ಸೋನ್ಕರ್ ಪ್ರಾಣಾಪಾಯದಿಂದ ಪಾರಾದರು. ಘಟನೆ ನಡೆದ ತಕ್ಷಣವೇ ಸ್ನೇಹಿತನಿಗೆ ಫೋನಾಯಿಸಿದ ಅವರು ಘಟನೆಯನ್ನು ವಿವರಿಸಿದರು. ‘‘ನೆರೆಮನೆಯಾತ ರಂಜಿತ್‌ನ ಫೋನ್ ಸಂಪರ್ಕಕ್ಕೆ ಸಿಕ್ಕಿತು. ಆತ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು 45 ನಿಮಿಷಗಳಲ್ಲಿ ಕಾರಿನ ಬಾಗಿಲು ಮುರಿದರು. ನಾನು ಪ್ರಾಣಾಯಪಾಯದಿಂದ ಪಾರಾಗಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ಸಮಯ ಇನ್ನೂ ಬಂದಿಲ್ಲ ಎಂದು ಭಾವಿಸಿದ್ದೇನೆ’’ ಎಂದು ಕೋಲ್ಕತಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನ್ಕರ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News