ವೇದ ಹೇಳಿ ಗಾಳ ಹಾಕಿದ ಜೇಟ್ಲಿ
ನವದೆಹಲಿ : ಲಂಡನ್ ಮೂಲದ ಬಹುರಾಷ್ಟ್ರೀಯ ಕಂಪೆನಿ ವೇದಾಂತದಿಂದ ದೇಣಿಗೆ ಪಡೆದು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2010ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಮೋದಿ ಸರಕಾರ ಕಾನೂನಿನ ಕುಣಿಕೆಯಿಂದ ಉಪಾಯವಾಗಿ ತಪ್ಪಿಸಿದೆ. ದೆಹಲಿ ಹೈಕೋರ್ಟ್ 2014ರಲ್ಲಿ ನೀಡಿದ ತೀರ್ಪೊಂದರಲ್ಲಿಈ ಕಾಯಿದೆಯನ್ನು ಉಲ್ಲಂಘಿಸಿದ ಎರಡೂ ಪಕ್ಷಗಳು ತಪ್ಪಿತಸ್ಥವೆಂದೂ ಸರಕಾರ ಹಾಗೂ ಚುನಾವಣಾ ಆಯೋಗ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಹೇಳಿತ್ತು. ಕೇಂದ್ರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರಿಂದ ಪ್ರಕರಣ ಇದೀಗ ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ.
ಇತ್ತೀಚೆಗೆ ತಮ್ಮ ಬಜೆಟ್ ಪ್ರಸ್ತುತ ಪಡಿಸುವ ವೇಳೆಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಉಪಾಯವಾಗಿ ಹಣಕಾಸು ಮಸೂದೆಯಲ್ಲಿ ಯಾರ ಗಮನಕ್ಕೂ ಬಾರದಂತೆ ಒಂದು ಅಧಿನಿಯಮವನ್ನು ಸೇರಿಸಿದ್ದು ಪೂರ್ವಾನ್ವಯಗೊಳ್ಳುವಂತೆ ಕಾಯಿದೆಯನ್ನು ತಿದ್ದುಪಡಿ ಮಾಡಿವೇದಾಂತ ಮತ್ತು ಅಂತೆಯೇ ಇರುವ ವಿದೇಶಿ ಕಂಪೆನಿಗಳನ್ನು ‘ಭಾರತೀಯ’ ಕಂಪೆನಿಗಳೆಂದುಪರಿಗಣಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಅಕ್ರಮವನ್ನು ಇಲ್ಲವಾಗಿಸಿದ್ದಾರೆ. ಈ ನಿಯಮ ಸೆಪ್ಟೆಂಬರ್ 26,2010ರಿಂದ ಪೂರ್ವಾನ್ವಯವಾಗುತ್ತದೆ.
ಈ ಹಿಂದೆ ಶೇ. 50ಕ್ಕಿಂತ ಹೆಚ್ಚು ವಿದೇಶಿ ಬಂಡವಾಳ ಹೊಂದಿದ ಯಾವುದೇ ಕಂಪೆನಿ ವಿದೇಶಿ ಕಂಪೆನಿಯೆಂದು ಪರಿಗಣಿಸಲ್ಪಡುತ್ತಿದ್ದರೆ ಈಗಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸರಕಾರ ನಿಗದಿಪಡಿಸಿದ ವಿದೇಶಿ ಬಂಡವಾಳ ಮಿತಿಯೊಳಗೆ ಒಂದು ಭಾರತೀಯ ಕಂಪೆನಿಯಲ್ಲಿ ವಿದೇಶಿ ಬಂಡವಾಳವಿದ್ದಲ್ಲಿ ಅಂತಹ ಕಂಪೆನಿಯನ್ನು ಎಫ್‌ಸಿಆರ್‌ಎ ಉದ್ದೇಶಗಳಿಗೆ ‘ಭಾರತೀಯ’ ಕಂಪೆನಿ ಎಂದು ಪರಿಗಣಿಸಲಾಗುವುದು.
ಈ ತಿದ್ದುಪಡಿಯಿಂದ ವೇದಾಂತದ ಹೊರತಾಗಿ ಬ್ರಿಟನ್, ಅಮೆರಿಕಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಸಾವಿರಾರು ಕಂಪೆನಿಗಳು ಭಾರತದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ. ಇನ್ನೊಂದು ವಿಧದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಕೃತ್ಯವನ್ನು ಕಾನೂನುಬದ್ಧಗೊಳಿಸುವುದರ ಜತೆಮೋದಿ ಸರಕಾರ ವಿದೇಶಿ ದೇಣಿಗೆ ವಿಚಾರದಲ್ಲಿ ಎಲ್ಲರಿಗೂ ಬಾಗಿಲನ್ನು ತೆರೆದು ಬಿಟ್ಟಿದೆ.