×
Ad

ಬೆಳ್ತಂಗಡಿ: ಎ 2ರಿಂದ ಸಿಐಟಿಯು ಸಮ್ಮೇಳನ, ಅಧ್ಯಯನ ಶಿಬಿರ

Update: 2016-04-02 14:55 IST

ಬೆಳ್ತಂಗಡಿ, ಎ.2: ಕೇಂದ್ರ , ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜ್ಯಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗದ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು , ಇದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರಗಳ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಸೆ. 2ರಂದು ಅಖಿಲ ಭಾರತ ಮಹಾ ಮುಷ್ಕರ ನಡೆಯಲಿದೆ ಎಂದು  ಸಿಐಟಿಯುನ ದ.ಕ ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಇಂದಬೆಟ್ಟು ಚರ್ಚ್ ಹಾಲ್ ನಲ್ಲಿ ಎ. 2ರಿಂದ 4 ರ ತನಕ ನಡೆಯುವ ಸಿಐಟಿಯುನ ಬೆಳ್ತಂಗಡಿ ತಾಲೂಕು ಸಮ್ಮೇಳನ ಹಾಗೂ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಟಿ.ಪಿ ಆ್ಯಂಟಿನಿ ವಹಿಸಿದ್ದರು.

ವೇದಿಕೆಯಲ್ಲಿ ಇಂದಬೆಟ್ಟು ಚರ್ಚ್ ನ ಧರ್ಮಗುರು ರೆ.ಫಾ.ಸೈಮನ್ ಡಿ'ಸೋಜ , ಬೆಳ್ತಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಮುನಿರಾಜ ಅಜ್ರಿ , ಸಿಐಟಿಯುನ ರಾಜ್ಯ ಕಾರ್ಯದರ್ಶಿ ಕೆ.ಎನ್ ಉಮೇಶ್ , ಉಡುಪಿ ಜಿಲ್ಲಾ ಕಾರ್ಯದರ್ಶಿ ಅದಮಾರು ಶ್ರೀಪತಿ ಆಚಾರ್ಯ , ಮುಖಂಡರಾದ ಬಿ.ಎಂ.ಭಟ್ , ವಸಂತನಡ , ನೆಬಿಸಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

 ಸಿಐಟಿಯುನ ಸಮ್ಮೇಳನದಲ್ಲಿ ಹಿರಿಯ ನಾಟಿ ವೈದ್ಯ ಕೆ ಜಿ ಪಣಿಕರ್ ರನ್ನು ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News