×
Ad

ವರ್ಕಾಡಿಯಲ್ಲಿ ಕಬಡ್ಡಿ ಪ್ರೀಮಿಯರ್ ಪಂದ್ಯಾಟಕ್ಕೆ ಚಾಲನೆ

Update: 2016-04-02 15:30 IST

ಮಂಜೇಶ್ವರ, ಎ. 2: ಇಲ್ಲಿನ ವರ್ಕಾಡಿಯ ಮಜೀರ್‌ಪಳ್ಳ ಪಂಚಾಯತ್ ಮೈದಾನದಲ್ಲಿ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. 

ಕಬಡ್ಡಿ ಪಂದ್ಯಾಟದ ಸಮಾಪರೋಪ ಸಮಾರಂಭ ಎ. 3 ರಂದು ನಡೆಯಲಿದೆ. ಉದ್ಘಾಟನಾ ಕರ್ಯಕ್ರಮದಲ್ಲಿ ದ್ವಜಾರೋಹಣವನ್ನು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಕೆ ಸುರೇಂದ್ರನ್ ನೇರವೆರಿಸಿದ್ದೂ, ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಶಾಸಕರಾದ ಪಿಬಿ ಅಬ್ದುಲ್ ರಝಾಕ್ ನಿರ್ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂ ಅಧ್ಯಕ್ಷ ಎಕೆಎಂ ಅಶ್ರಫ್, ಎಸ್ ನಿಝಾಮುದ್ದೀನ್, ಸುದೀರ್ ಕುಮಾರ್, ರೈಮಂಡ್ ಡಿ ಸೋಜ, ವಿಜಯ್ ಕುಮಾರ್, ಸುಲೈಮಾನ್, ವರ್ಕಾಡಿ ಗ್ರಾಮ ಪಂ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿಎ, ಮಂಜೇಶ್ವರ ಬ್ಲಾಕ್ ಪಂ ಸದಸ್ಯರಾದ ಫಾತಿಮತ್ ಜವುರ, ವರ್ಕಾಡಿ ಪಂ ಸದಸ್ಯೆ ರಹ್ಮತ್ ರಝಾಕ್, ಸದಸ್ಯರಾದ ವಸಂತ ಕುಮಾರ್, ಗೋಪಾಲ ಕೃಷ್ಣ, ಹರೀಶ್ ಚಂದ್ರ ಮಂಜೇಶ್ವರ, ದೂಮಪ್ಪ ಶೆಟ್ಟಿ, ಮಾಂಕೋಡಿ ಮುಹಮ್ಮದ್, ಹಾಜಿ ಮುಹಮ್ಮದ್ ಹೋನೆಸ್ಟ್, ಉದಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಆರೋಗ್ಯ ಸಚಿವ ಯುಟಿ ಖಾದರ್, ಮುಹಮ್ಮದ್ ಇಬ್ರಾಹಿಂ ಪಾವೂರು, ಫಾತಿಮಾ ಮೊಯ್ದಿನ್, ಮಾಜಿ ಶಾಸಕರಾದ ಸಿಎಚ್ ಕುಂಞಂಬು, ಗಿರೀಶ್ ಶೆಟ್ಟಿ ಮೊದಲಾದ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News