×
Ad

ಉಳ್ಳಾಲ: ನೇತ್ರಾವತಿ ಸೇತುವೆಯಡಿ ಮಹಿಳೆ ಶವ ಪತ್ತೆ

Update: 2016-04-02 20:05 IST

  ಉಳ್ಳಾಲ: ಅಪರಿಚಿತ ಮಹಿಳೆಯ  ಶವವೊಂದು ನೇತ್ರಾವತಿ ಸೇತುವೆಯಡಿ ಶನಿವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದೆ.

  ನೇತ್ರಾವತಿ ನದಿ ತೀರದಲ್ಲಿ ಸುಮಾರು 35-40 ವರ್ಷ ಪ್ರಾಯದ ಅಂದಾಜಿನ ಅಪರಿಚಿತ ಮಹಿಳೆಯ ಶವ  ದೊರೆತಿದ್ದು,  ಮಹಿಳೆಯ ಗುರುತು ಪತ್ತೆ ಹಚ್ಚಲು ಯಾವುದೇ ದಾಖಲೆಗಳು ಸಿಕ್ಕಿಲ್ಲ್ಲ. ಶವ ಪತ್ತೆಯಾದ ಸಮೀಪ ಮಂಗಳೂರಿನ ವೈದ್ಯರೊಬ್ಬರ ವಿಸಿಟಿಂಗ್ ಕಾಡ್‌ರ್  ದೊರೆತಿದ್ದು, ಮಾನಸಿಕವಾಗಿ ನೊಂದು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ, ವೆನ್ಲಾಕ್ ಆಸ್ಪತ್ರೆಗೆ ಮಹಜರಿಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News